ಹಾವೇರಿ: ಗ್ಯಾರಂಟಿ ಯೋಜನೆ (Guarantee Scheme) ಜಾರಿ ಮಾಡಿದರೆ ಅಭಿವೃದ್ಧಿ ಯೋಜನೆಗೆ ಹಣ ಇರಲ್ಲ ಎಂದು ಮೋದಿ (Narendra Modi) ಅಪಹಾಸ್ಯ ಮಾಡಿದರು. ಬಡವರಿಗೆ ತಲುಪುವ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಬಿಜೆಪಿಯ ಬಡ ಕಾರ್ಯಕರ್ತರು ಇದರ ಲಾಭ ಪಡೆಯುತ್ತಿಲ್ವಾ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.
ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಹಿನ್ನೆಲೆ ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿ ನಡೆದ ಮತದಾರರಿಗೆ ಅಭಿನಂದನಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾಲ್ಕವರೆ ಕೋಟಿ ಜನರು ಗ್ಯಾರಂಟಿ ಲಾಭ ಪಡೆಯುತ್ತಿದ್ದಾರೆ. 7 ಕೆಜಿಯಿಂದ 5 ಕೆಜಿಗೆ ಅಕ್ಕಿ ಇಳಿಸಿದ್ದು ಯಾರಪ್ಪ ಬೊಮ್ಮಾಯಿ? ನಿಮಗೆ ನಾಚಿಕೆಯಾಗಲ್ವಾ? ಇದೇ ಕೇಂದ್ರ ಸರ್ಕಾರ ಅಕ್ಕಿ ಇಟ್ಟುಕೊಂಡು ಅಕ್ಕಿ ಕೊಡಲಿಲ್ಲ. ಯಾವುದೇ ರಾಜ್ಯದಲ್ಲಿ ಬಿಜೆಪಿಯವರು 10 ಕೆಜಿ ಅಕ್ಕಿ ಕೊಟ್ಟಿದ್ದ ಉದಾಹರಣೆ ಇದ್ದರೆ ಹೇಳಿ. ನಾನು ಇಂದೇ ರಾಜೀನಾಮೆ ಕೊಡುತ್ತೇನೆ. ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಯಾವುದೇ ಕಾರಣಕ್ಕೂ 10 ಕೆಜಿ ಅಕ್ಕಿ ನಿಲ್ಲಿಸಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸರಣಿ ಸಾವು – ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ
ನ್ಯಾಯಯುತವಾಗಿ ಬರಬೇಕಾದ ಹಣ ನಮಗೆ ಕೊಡುತ್ತಿಲ್ಲ. ನಮ್ಮ ತೆರಿಗೆ ಪಾಲು ಸರಿಯಾಗಿ ಕೊಡುತ್ತಿಲ್ಲ. ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೆ ನಮಗೆ ಬರುತ್ತಿರೋದು 60,000 ಕೋಟಿ ಮಾತ್ರ. ನರೇಂದ್ರ ಮೋದಿ ಜೀ ಇದು ನ್ಯಾಯಾನಾ? ಒಂದು ರೂಪಾಯಿ ಹಣ ಕೊಡಲಿಲ್ಲ. ಬಸವರಾಜ ಬೊಮ್ಮಾಯಿ ಯಾವಾತ್ತಾದರೂ ಇದನ್ನು ಕೇಳಿದ್ದೀಯಾ ಎಂದು ಗುಡುಗಿದರು. ಇದನ್ನೂ ಓದಿ: ನಕಲಿ ಅಡ್ರೆಸ್ ಕೊಟ್ಟು ಮಾದಕ ವಸ್ತು ಕೊರಿಯರ್ – 2 ತಿಂಗಳಾದ್ರೂ ಪತ್ತೆಯಾಗಿಲ್ಲ ವಿಳಾಸ
ಪೈಲ್ವಾನ್ ಪಠಾಣ್‌ನನ್ನು ಶಿಗ್ಗಾಂವಿ ಮತದಾರರ ಆರ್ಶೀವಾದದಿಂದ ವಿಧಾನಸೌಧನಕ್ಕೆ ಕಳುಹಿಸಿದ್ದೀರಿ. ಪಕ್ಷದ ವತಿಯಿಂದ ಸಚಿವರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. 1999ರಲ್ಲಿ ಖಾದ್ರಿ ಗೆದ್ದಿದ್ದರು. ನಂತರ 5 ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ. ಯಾಸೀರ್ ಖಾನ್ ಪಠಾಣ್ ಹೆಸರು ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಗೆದ್ದಾಯಿತು ಎಂದು ಪ್ರಚಾರ ಮಾಡಿದರು. ಈ ಬಾರಿ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಇತ್ತು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಗ್ಯಾರಂಟಿ ಯೋಜನೆ ನೀಡಿದ್ದೇವೆ. ಭಾವೈಕ್ಯತೆಯ ನಾಡು ಇದು. ಜಾತಿ ನೋಡಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ನೋಡಿ ಮತ ಹಾಕುತ್ತಾರೆ ಎಂಬ ಧೈರ್ಯದ ಮಾತು ಹೇಳಿದೆ ಎಂದರು. ಇದನ್ನೂ ಓದಿ: `ಮಹಾ’ ಸ್ಪೀಕರ್ ಆಗಿ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಅವಿರೋಧ ಆಯ್ಕೆ!
ಇದು ಬರೀ ಪಠಾಣ್ ಗೆಲುವು ಅಲ್ಲ. ಚುನಾವಣೆಯಲ್ಲಿ ಶ್ರಮಪಟ್ಟ ಎಲ್ಲರ ಗೆಲವು. ಕಳೆದ ಬಾರಿ ಬೊಮ್ಮಾಯಿ 35,000 ಅಂತರದಿಂದ ಗೆದ್ದಿದ್ದರು. ಈ ಬಾರಿ ಪಾಪ ಗೆಲುವು ಅವರದ್ದೇ ಎಂದು ತಿಳಿದಿದ್ದರು. ಪಠಾಣ್ 50,000 ಮತಗಳ ಅಂತರದಿಂದ ಗೆದ್ದು ಬೊಮ್ಮಾಯಿ ಮಗನನ್ನ ಸೋಲಿಸಿದ್ದಾರೆ. ಚುನಾವಣೆಯಲ್ಲಿ ಲೆಕ್ಕವಿಲ್ಲದಷ್ಟು ಬೊಮ್ಮಾಯಿ ಖರ್ಚು ಮಾಡಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ: ಸಿರಿಯಾದಲ್ಲಿ ಭಾರತೀಯ ಪ್ರಜೆಗಳು ಸೇಫ್ – ರಾಯಭಾರ ಕಚೇರಿಯಿಂದ ಮಾಹಿತಿ
ನನ್ನ ಮೇಲೆ ಸುಳ್ಳು ಆರೋಪ ಮಾಡಿದರು. ಕರ್ನಾಟಕದ ಜನತೆ ಆಶೀರ್ವಾದ ಇರೋವರೆಗೆ ನನ್ನ ಜಗ್ಗಿಸೋಕೆ ಆಗಲ್ಲ, ಬಗ್ಗಿಸೋಕೆ ಆಗಲ್ಲ. ಅವರೇನಾದರೂ ನನ್ನ ಮೇಲೆ ಕ್ರಮ ತೆಗೆದುಕೊಂಡರೆ ನೀವು ಸುಮ್ಮನೇ ಇರುತ್ತೀರಾ? ಅಭಿಮಾನಿಗಳೇ ನಮ್ಮ ದೇವರು ಎಂದು ರಾಜ್‌ಕುಮಾರ್ ಹೇಳುತ್ತಿದ್ದರು. ನಮಗೆ ಮತದಾರರೇ ದೇವರುಗಳು ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರದ ಬೊಕ್ಕಸ ಬರಿದಾಗಿ ಕಳಪೆ ಔಷಧ ಖರೀದಿ, ಬಾಣಂತಿಯರ ಸಾವಿಗೆ ಇದೇ ಕಾರಣ: ಜೋಶಿ