ಚಾಮರಾಜನಗರ: ಬ್ಯಾಂಕ್ ಹಾಗೂ ಎಟಿಎಂ ಬಾಗಿಲಿನಲ್ಲೇ ಮಲ ವಿಸರ್ಜನೆ ಮಾಡಿದ್ದಲ್ಲದೆ ಬ್ಯಾಂಕ್ ಬಾಗಿಲು ಹಾಗೂ ಬೀಗಕ್ಕೂ ಹೇಸಿಗೆ ಮೆತ್ತಿ ವಿಕೃತ ಮೆರೆದಿರುವ ಘಟನೆ ನಗರದ ಕೆನರಾ ಬ್ಯಾಂಕ್‍ನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಕರ್ತವ್ಯಕ್ಕೆ ಬಂದ ಸಿಬ್ಬಂದಿ ಶಾಕ್ ಆಗಿ ಬಾಗಿಲು ಹಾಗೂ ಬೀಗಗಳಿಗೆ ಮಲ ಮೆತ್ತಿದ ಕಾರಣ ಬಾಗಿಲು ತೆರೆಯಲಾರದೆ ಪರದಾಡುವಂತಾಯಿತು. ಸ್ಥಳಕ್ಕೆ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ಬಗ್ಗೆ ಮಾತನಾಡಿ – ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ ಆಹ್ವಾನ
ಬಳಿಕ ನಗರಸಭೆ ಪೌರಕಾರ್ಮಿಕರು ಗಲೀಜು ಸ್ವಚ್ಛಗೊಳಿಸಿದರು. 11 ಗಂಟೆಯ ನಂತರ ಬ್ಯಾಂಕ್ ಸೇವೆ ಆರಂಭಗೊಂಡಿತು. ಇದನ್ನೂ ಓದಿ: 1 ವರ್ಷ ನನ್ನ ಕೈ, ಕಾಲುಗಳಿಗೆ ಚಿಕಿತ್ಸೆ ಬೇಕಿದೆ: ಉಕ್ರೇನ್‌ನಲ್ಲಿ ಗುಂಡೇಟು ತಿಂದಿದ್ದ ಭಾರತದ ವಿದ್ಯಾರ್ಥಿ