ಕನ್ನಡ ಸಿನಿಮಾದಲ್ಲೂ ಸೊಂಟ ಬಳುಕಿಸಿದ್ದ ಯುವಕರ ಫೇವರೇಟ್ ನಟಿ ಪೂನಂ

Public TV
1 Min Read
poonam pandey

ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ (Poonam Pandey) ಫೆ.2ರಂದು ಗರ್ಭಕಂಠ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ನಟಿಯ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ಪೂನಂ ಪಾಂಡೆ ವಿಚಾರಗಳು ಟ್ರೆಂಡಿಂಗ್‌ನಲ್ಲಿದ್ದು, ಕನ್ನಡದ ಸಿನಿಮಾವೊಂದರಲ್ಲಿ ಕೂಡ ನಟಿ ಸೊಂಟ ಬಳುಕಿಸಿದ್ದರು. ಆ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ.

poonam pandey 2 1

ಸದಾ ಕಾಂಟ್ರವರ್ಸಿ ಮೂಲಕ ಸದ್ದು ಮಾಡುತ್ತಿದ್ದ ಪೂನಂ ಪಾಂಡೆ ಕನ್ನಡದ ‘ಲವ್ ಇಸ್ ಪಾಯಿಸನ್’ (Love Is Poison) ಎಂಬ ಸಿನಿಮಾದಲ್ಲಿ ನಟಿಸಿದ್ದರು. ‘ಹಳ್ಳಿ ಹೈದ’ ಖ್ಯಾತಿಯ ರಾಜೇಶ್ (Rajesh) ನಟನೆಯ ಸಿನಿಮಾದಲ್ಲಿ ಪೂನಂ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಚಿತ್ರದಲ್ಲಿ ಸಖತ್ ಬೋಲ್ಡ್ & ಹಾಟ್ ಆಗಿ ಕಾಣಿಸಿಕೊಂಡಿದ್ದರು.

poonam

ಮಾಡೆಲ್ ಕಂ ನಟಿಯಾಗಿದ್ದ ಪೂನಂ ಪಾಂಡೆ ಸದಾ ಕಾಂಟ್ರವರ್ಸಿಗಳಿಂದ ಸದ್ದು ಮಾಡುತ್ತಿದ್ದರು. ಇದೀಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ ಪೂನಂ ಇಂದು (ಫೆ.2) ಇಹಲೋಕ ತ್ಯಜಿಸಿದ್ದಾರೆ.

ಪೂನಂ ಪಾಂಡೆ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಲಾಗಿದೆ. ಇಂದು ಮುಂಜಾನೆ ಸಾಕಷ್ಟು ಕಷ್ಟಕರವಾಗಿತ್ತು. ಸರ್ವಿಕಲ್ ಕ್ಯಾನ್ಸರ್‌ನಿಂದ ನಮ್ಮ ಪ್ರೀತಿಯ ಪೂನಂ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ. ಈ ದುಃಖದ ಸಂದರ್ಭದಲ್ಲಿ ನಮಗೆ ಪ್ರೈವಸಿ ನೀಡಿ ಎಂದು ಪೋಸ್ಟ್ ಮಾಡಲಾಗಿದೆ.

Share This Article