ಬಾಲಿವುಡ್ ನ ವಿವಾದಿತ ತಾರೆ, ಬೋಲ್ಡ್ ಮಾತುಗಳ ಮೂಲಕವೇ ಫೇಮಸ್ ಆಗಿರುವ ಪೂನಂ ಪಾಂಡೆ ತಮ್ಮ ದಾಂಪತ್ಯ ಜೀವನದ ಬಗ್ಗೆ ಖುಲಂ ಖುಲ್ಲಾ ಮಾತನಾಡಿದ್ದಾರೆ. ಕಂಗನಾ ರಣಾವತ್ ನಡೆಸಿಕೊಡುವ ‘ಲಾಕಪ್’ ರಿಯಾಲಿಟಿ ಶೋನಲ್ಲಿ ತಮ್ಮ ಪ್ರತಿಸ್ಪರ್ಧೆಗಳ ಜತೆ ಮಾತನಾಡುತ್ತಾ ಮಾಜಿಪತಿ ಹೇಗಿದ್ದ ಎನ್ನುವ ಸಿಕ್ರೇಟ್ ಅನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ : ನಟ ಚೇತನ್ ಅಮೆರಿಕಾಗೆ ಗಡಿಪಾರು? : ಆತಂಕದಲ್ಲಿ ಚಿತ್ರ ನಿರ್ಮಾಪಕರು
ಬಹುಕಾಲದ ಗೆಳೆಯ, ನಿರ್ಮಾಪಕ ಸ್ಯಾಮ್ ಬಾಂಬೆ ಜತೆ ಪೂನಂ 2020ರಲ್ಲಿ ಸಪ್ತಪದಿ ತುಳಿದಿದ್ದರು. ಮದುವೆಯಾದ ಒಂದೇ ತಿಂಗಳಿಗೆ ದಾಂಪತ್ಯದಲ್ಲಿ ಬಿರುಕು ಬಿಟ್ಟ ವಿಚಾರವನ್ನು ಸ್ವತಃ ಪೂನಂ ಹೇಳಿಕೊಂಡಿದ್ದರು. ಅಲ್ಲದೇ, ಪತಿಯಿಂದ ಹಲ್ಲೆಗೊಳಗಾಗಿದ್ದೇನೆ ಎಂದೂ ಅವರು ದೂರು ಕೊಟ್ಟಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಸ್ಯಾಮ್ ವಿರುದ್ಧ ಮತ್ತೊಂದು ದೂರು ದಾಖಲಿಸಿ, ತಮಗೆ ಚಿತ್ರಹಿಂಸೆ ಕೊಟ್ಟಿದ್ದಾನೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ
ಲಾಕಪ್ ಶೋನಲ್ಲಿ ಸಹಸ್ಪರ್ಧಿಗಳಾದ ಪಾಯಲ್ ಮತ್ತು ಕಾರನ್ವೀರ್ ಜತೆ ಮಾತನಾಡುತ್ತಾ, ಅವನು ದಿನಪೂರ್ತಿ ಕುಡಿಯುತ್ತಿದ್ದ. ಕುಡಿದಾಗ ಮೃಗದಂತೆ ವರ್ತಿಸುತ್ತಿದ್ದ. ಪದೇಪದೇ ನನ್ನ ತಲೆಯ ಒಂದು ಭಾಗಕ್ಕೆ ಅವನು ಹೊಡೆಯುತ್ತಿದ್ದರಿಂದ ರಕ್ತಸ್ರಾವ ಕೂಡ ಆಗಿತ್ತು ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ : ಅದ್ಧೂರಿ ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೀರೋ ಆಗಿ ಲಾಂಚ್
ತಮ್ಮ ನಾಲ್ಕು ಅಂತಸ್ತಿನ ಮನೆಯ ಪುರಾಣವನ್ನೂ ಬಿಚ್ಚಿಟ್ಟ ಪೂನಂ. ಖಾಸಗಿಯಾಗಿ ಒಂದು ಕೋಣೆಯಲ್ಲಿ ಇರಲು ಸ್ಯಾಮ್ ಬಿಡುತ್ತಿರಲಿಲ್ಲ, ಮೊಬೈಲ್ ನಲ್ಲಿ ಮಾತನಾಡಿದರೆ ಅವನಿಗೆ ಕೋಪ, ಸದಾ ತನ್ನೊಂದಿಗೆ ಇರಬೇಕು ಅಂತ ಆತ ಬಯಸುತ್ತಿದ್ದ ಎಂದು ಹೇಳುತ್ತಾ ಹೆಣ್ಣಿನ ಮೇಲೆ ನಡೆವ ದೌರ್ಜನ್ಯದ ಕುರಿತೂ ಅವರು ಶೋನಲ್ಲಿ ಮಾತನಾಡಿದರು. ಇದನ್ನೂ ಓದಿ : ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್
ಪೂನಂ ಮಾತನಾಡಿದ ಅಷ್ಟೂ ಮಾತುಗಳನ್ನು ವಾಹಿನಿಯು ಪ್ರಸಾರ ಮಾಡಿದ್ದು, ಪೂನಂ ಬಗ್ಗೆ ಪ್ರೇಕ್ಷಕರಿಗೆ ಸಹಾನುಭೂತಿ ಶುರುವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಕಂಗನಾ ರಣಾವತ್ ನಡೆಸಿಕೊಡುವ ಈ ಶೋನಲ್ಲಿ ಬಹುತೇಕ ವಿವಾದಿತ ತಾರೆಯರೇ ಸ್ಪರ್ಧಿಗಳಾಗಿದ್ದಾರೆ ಎನ್ನುವುದು ಈ ಶೋನ ಮತ್ತೊಂದು ವಿಶೇಷ.