ಬಾಲಿವುಡ್ ನಟಿ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಿಂತ ವೈಯಕ್ತಿಕ ವಿಚಾರಗಳಿಂದ ಹೆಚ್ಚು ಗುರುತಿಸಿಕೊಳ್ಳುವ ಪೂನಂ ಪಾಂಡೆ, ಈಗ ಬ್ರಾ ಧರಿಸದೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ನೆಟ್ಟಿಗರಿಂದ ಟ್ರೋಲ್ಗೆ ಒಳಗಾಗಿದ್ದಾರೆ.
ಸಿನಿಮಾಗಳಲ್ಲಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಎಂತಹದ್ದೇ ಬೋಲ್ಡ್ ಫೋಟೋಗಳನ್ನು ಧರಿಸಿದ್ದರು. ಸಾರ್ವಜನಿಕವಾಗಿ ತಾರೆಯರು ಸಿಕ್ಕಾಗ ಸಭ್ಯತೆಯಿಂದ ಕಾಣಿಸಿಕೊಂಡರೆ ಚೆಂದ ಎಂಬ ನಿಲುವು ಅಭಿಮಾನಿಗಳಿಗೆ ಇರುತ್ತೆ ಹೀಗಿರುವಾಗ ನಟಿ ಪೂನಂ ಪಾಂಡೆ ಈಗ ನೆಟ್ಟಿಗರ ಕೆಂಗಣ್ಣಿಗೆ ಗುರುಯಾಗಿದ್ದಾರೆ. ನಟಿಯ ಅತಿಯಾದ ಬೋಲ್ಡ್ನೆಸ್ಗೆ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ಗೆ ವಿಶೇಷ ಉಡುಗೊರೆ ನೀಡಿದ ಕಪಿಲ್ ದೇವ್
View this post on Instagram
ಮುಂಬೈನಲ್ಲಿ ಕ್ರಾಪ್ ಟಾಪ್ ಧರಿಸಿ ರಸ್ತೆಗಳಿದಿರುವ ಪೂನಂ, ಒಳ ಉಡುಪುಯಿಲ್ಲದೇ ಕಾಣಿಸಿಕೊಂಡಿದ್ದಾರೆ. ಈ ವೇಳೆ ಖಾಸಗಿ ಅಂಗ ಪ್ರದರ್ಶನವಾಗಿದೆ. ನಟಿಯ ಅವತಾರ ಫ್ಯಾನ್ಸ್ ಗಮನಕ್ಕೆ ಬಂದಿದೆ. ನಾವು ನಿಮ್ಮ ಅಭಿಮಾನಿಗಳು ನಿಜ, ದಯವಿಟ್ಟು ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳಬೇಡಿ. ಸ್ವಲ್ಪವಾದರೂ ಗೌರವ ಉಳಿಸಿಕೊಳ್ಳಿ ಎಂದು ಪೂನಂಗೆ ಫ್ಯಾನ್ಸ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನಾದರೂ ಇದನ್ನ ತಿದ್ದಿಕೊಂಡು ಸಭ್ಯವಾಗಿ ಕಾಣಿಸಿಕೊಳ್ತಾರಾ ಪೂನಂ ಕಾದುನೋಡಬೇಕಿದೆ.
Live Tv