ಮಾದಕ ನಟಿ ಪೂನಂ ಪಾಂಡೆಯ (Poonam Pandey) ಟಾಪ್‌ಲೆಸ್ ಅವತಾರಗಳು ಹೊಸದೇನಲ್ಲ. ಆಗಾಗ್ಗೆ ತನ್ನ ಮೈಮಾಟವನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶನಕ್ಕೀಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.
ಕೆಲವು ತಿಂಗಳ ಹಿಂದೆ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿರುವುದಾಗಿ ಇಡೀ ದೇಶವನ್ನೇ ನಂಬಿಸಿದ್ದ ಚಾಲಕಿ ಈಕೆ. ಇದೀಗ ಅಭಿಮಾನಿಗಳಿಗೆ ಕಚಗುಳಿ ಇಡುವ ಮೂಲಕ ಮತ್ತೆ ಸೋಷಿಯಲ್ ಮೀಡಿಯಾಗಳಲ್ಲಿ (Social Media) ಸುದ್ದಿಯಾಗಿದ್ದಾರೆ. ಮೈಮೇಲೆ ತುಂಡು ಬಟ್ಟೆಯಿಲ್ಲದೇ ಕೇವಲ 2 ತುಂಡು ನ್ಯೂಸ್ ಪೇಪರ್ (News Paper) ಸುತ್ತಿಕೊಂಡು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಮಾದಕ ಫೋಟೋಗಳನ್ನ ತಮ್ಮ ಇನ್‌ಸ್ಟಾ ಖಾತೆಯಲ್ಲೂ ಹಂಚಿಕೊಂಡು ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಜೊತೆಗೆ ʻನನ್ನನ್ನು ಓದಲು ಬಯಸುವಿರಾʼ ಅಂತ ಇಂಗ್ಲಿಷ್‌ನಲ್ಲಿ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಇದಕ್ಕೆ ಕಾಮೆಂಟ್ ಮಾಡಿರುವ ನೆಟ್ಟಿಗರು ʻಪೇಪರ್ ಕೊಡಿ ಸ್ವಲ್ಪ ಓದಿ ಕೊಡ್ತೀನಿ ಅಂತಾ ಕಾಲೆಳೆದಿದ್ದಾರೆ. ಇನ್ನೂ ಕೆಲವರು, ಸೋ ಹಾಟ್, ಸೆಕ್ಸಿ ಅಂತಾ ಕಾಮೆಂಟ್ ಮಾಡಿದ್ರೆ, ಉಳಿದವರು ವಾವ್ ಎನ್ನುತ್ತಾ ಕಪ್ಪು ಹೃದಯ ಎಮೋಜಿಯನ್ನ ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆ ಬಾಲಿವುಡ್ ನಟಿ ವಿದ್ಯಾ ಬಾಲನ್ (Vidya Balan) ನ್ಯೂಸ್ ಪೇಪರ್ ನಿಂದ ಖಾಸಗಿ ಅಂಗ ಮುಚ್ಚಿಕೊಂಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಫೋಟೋದಲ್ಲಿ (Photoshoot) ವಿದ್ಯಾ ಬಾಲನ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ನಾನಾ ರೀತಿಯ ಪ್ರಶ್ನೆಗಳನ್ನು ಮಾಡುತ್ತಿದ್ದರು.
ಸದಾ ಸೀರೆಯಲ್ಲೇ ಕಂಗೊಳಿಸುತ್ತಿದ್ದ ವಿದ್ಯಾ ಬಾಲನ್, ಯಾಕೆ ಈ ರೀತಿ ಕಾಣಿಸಿಕೊಂಡಿದ್ದಾರೆ ಅಂತೆಲ್ಲ ಕೇಳಿದ್ದರು. ಇದಕ್ಕೂ ಮುನ್ನ ಕಿಯಾರಾ ಅಡ್ವಾಣಿ ನ್ಯೂಸ್‌ಪೇಪರ್ ಮುಚ್ಚಿಕೊಂಡು ಫೋಟೋ ತೆಗೆಸಿ ಪೇಚಿಗೆ ಸಿಲುಕಿದ್ದರು.