– ಅಂಜನಾದ್ರಿ ಬೆಟ್ಟದಲ್ಲಿ ತಲೆಎತ್ತಲಿದೆ 9 ಅಡಿ ಪಂಚಲೋಹದ ರಾಮ ಮೂರ್ತಿ
ಕೊಪ್ಪಳ: ಹನುಮನ ನಾಡು ಕೊಪ್ಪಳದ (Koppal) ಅಂಜನಾದ್ರಿ ಬೆಟ್ಟಕ್ಕೆ (Anjanadri Hills) ಭಾನುವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಭೇಟಿ ನೀಡಿದ್ದು, ಸ್ಥಳೀಯ ಬಿಜೆಪಿ (BJP) ಮುಖಂಡರು ಸಚಿವರನ್ನು ಸ್ವಾಗತಿಸಿದ್ದಾರೆ.
Advertisement
ಕೊಪ್ಪಳ ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಸಚಿವೆ ಶೋಭಾ ಭೇಟಿ ನೀಡಿ ವಿಕಸಿತ ಭಾರತದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಶೋಭಾ ಕರಂದ್ಲಾಜೆಗೆ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸಾಥ್ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ವಿಕಸಿತ ಭಾರತದಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜಕಾರಣವನ್ನು ಮಾಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ರಜೆ ಕೊಡೋ ಬಗ್ಗೆ ಬಿಜೆಪಿಯವ್ರು ಹೇಳಿಕೊಡಬೇಕಿಲ್ಲ: ಡಿಕೆ ಶಿವಕುಮಾರ್
Advertisement
Advertisement
ವಿಕಸಿತ ಭಾರತ ಯೋಜನೆಯನ್ನು ಬ್ಯಾಂಕ್‌ನವರಿಗೆ ಜವಾಬ್ದಾರಿ ವಹಿಸಲಾಗಿದೆ. 2047ರ ವೇಳೆಗೆ ಭಾರತವನ್ನು ವಿಕಸಿತ ಮಾಡುವುದು ಮೋದಿ (Narendra Modi) ಅವರ ಅಪೇಕ್ಷೆ. ವಿಕಸಿತ ಭಾರತದ ಗಾಡಿ ಮೋದಿ ಅವರ ಗ್ಯಾರಂಟಿ ಕಾ ಗಾಡಿ ಎಂದು ಪ್ರಸಿದ್ಧಿ ಪಡೆದಿದೆ. ಸೋಮವಾರ ರಾಮಮಂದಿರ ಉದ್ಘಾಟನೆ ಆಗುತ್ತಿದೆ. ಮೋದಿ ಅವರ ನೇತೃತ್ವದಲ್ಲಿ ಉದ್ಘಾಟನೆ ಆಗುತ್ತಿದೆ. ರಾಮನ ಮಂದಿರ ಉದ್ಘಾಟನೆ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸುತ್ತೇವೆ. ಮೊದಲ ಪೂಜೆ ಆಂಜನೇಯನ ಹೆಸರಿನಲ್ಲಿ ಮಾಡುವ ಉದ್ದೇಶದಿಂದ ಇಲ್ಲಿಗೆ ಬರಲಾಗಿದೆ. ಅಂಜನಾದ್ರಿ ಬೆಟ್ಟದಲ್ಲಿ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಇಂದೇ ಅಯೋಧ್ಯೆಗೆ ತೆರಳಲಿದೆ ದೊಡ್ಡಗೌಡರ ಕುಟುಂಬ
Advertisement
ಹನುಮನ ಜನ್ಮ ಸ್ಥಳವಾಗಿರುವ ಕೊಪ್ಪಳದಲ್ಲೂ ಪ್ರಭು ಶ್ರೀರಾಮನ ಮೂರ್ತಿ ಸ್ಥಾಪನೆ ಮಾಡಲಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ರಾಮನ ಮೂರ್ತಿ ಸ್ಥಾಪಿಸಲಾಗುತ್ತದೆ. ಸೋಮವಾರ ಅಯೋಧ್ಯೆಯಲ್ಲಿ (Ayodhya) ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಹಿನ್ನೆಲೆ ಅಂಜನಾದ್ರಿ ಬೆಟ್ಟದಲ್ಲೂ ರಾಮನ ಮೂರ್ತಿ ಸ್ಥಾಪನೆ ಮಾಡಲಾಗುತ್ತಿದೆ. ಅಂಜನಾದ್ರಿ ಬೆಟ್ಟದ ಪ್ರವೇಶದ್ವಾರದ ಬಳಿ ಮೂರ್ತಿ ಸ್ಥಾಪನೆಯಾಗಲಿದೆ. 9 ಅಡಿ ಪಂಚಲೋಹದ ರಾಮನ ಮೂರ್ತಿ ಅಂಜನಾದ್ರಿ ಬೆಟ್ಟ ತಲುಪಿದ್ದು, ರಾಮಮೂರ್ತಿ ಸ್ಥಾಪನೆ ಹಿನ್ನೆಲೆ ಭಾನುವಾರ ಮತ್ತು ಸೋಮವಾರ ಅಂಜನಾದ್ರಿಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿವೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಸಮಯಕ್ಕೆ ಮೈಸೂರಿನಲ್ಲೂ ವಿಶೇಷ ಪೂಜೆ – ಶ್ರೀರಾಮನಿಗೆ ಸಪ್ತ ನದಿಗಳ ನೀರಿನಿಂದ ಜಲಾಭೀಷೇಕ!