ವಡೋದರಾ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರ್ತಿ ಪೂಜಾ ವಸ್ತ್ರಾಕರ್ ಸಿಡಿಸಿದ ಸಿಕ್ಸರ್ ಗೆ ಸ್ಕೋರ್ ಬೋರ್ಡ್ ನಲ್ಲಿದ್ದ ಅಕ್ಷರಗಳು ಉರುಳಿಬಿದ್ದ ವಿಡಿಯೋ ವೈರಲ್ ಆಗಿದೆ.
ಐಸಿಸಿ ಮಹಿಳಾ ಕ್ರಿಕೆಟ್ ಚಾಂಪಿಯನ್‍ಶಿಪ್ ಭಾಗವಾಗಿ ಆಯೋಜಿಸಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೆನೇ ಪಂದ್ಯದ 40ನೇ ಓವರ್ ನಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ಜೆಸ್ ಜೋನ್ಸನ್ ಎಸೆತವನ್ನು ಪೂಜಾ ವಸ್ತ್ರಕರ್ ಸಿಕ್ಸರ್ ಗೆ ಅಟ್ಟಿದ್ದರು. ಈ ವೇಳೆ ಬಾಲ್ ಸ್ಕೋರ್ ಬೋರ್ಡ್‍ಗೆ ಬಿದ್ದು ಅದರಲ್ಲಿ ಜೋಡಣೆಯಾಗಿದ್ದ ಅಕ್ಷರಗಳು ಕೆಳಗಡೆ ಬಿದ್ದಿದೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ವನಿತೆಯರ ತಂಡ ಗೆಲುವಿನ ಸನಿಹದಲ್ಲಿ ಎಡವಿತ್ತು. ಪೂಜಾ ವಸ್ತ್ರಾಕರ್ ಬೌಲರ್ ಆಗಿದ್ದು, ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬಿಸಿ 33 ಎಸೆಗಳಲ್ಲಿ 30 ರನ್ ಸಿಡಿಸಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ (51) ಸಿಡಿಸಿದ್ದ ಪೂಜಾ ವಸ್ತ್ರಾಕರ್ ಭಾರತದ ದಿಟ್ಟ ಹೋರಾಟ ನೀಡಲು ಕಾರಣರಾಗಿದ್ದರು.
Advertisement
ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ ಎರಡು ಪಂದ್ಯಗಳಲ್ಲಿ ಸೋಲುವ ಮೂಲಕ ಸರಣಿಯನ್ನು ಕಳೆದು ಕೊಂಡಿದೆ. ಮೊದಲ ಪಂದ್ಯದಲ್ಲಿ 5 ವಿಕೆಟ್ ಸೋಲು ಪಡೆದಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ 60 ರನ್ ಅಂತರದಿಂದ ಸೋಲನ್ನು ಅನುಭವಿಸಿದೆ.
Advertisement
ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಮಾರ್ಚ್ 18 ರಂದು ನಡೆಯಲಿದೆ. ಈ ಸರಣಿಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ಮಾರ್ಚ್ 22 ರಿಂದ ಆರಂಭವಾಗುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ತ್ರಿಕೋನ ಟಿ20 ಸರಣಿಯಲ್ಲಿ ಭಾಗವಹಿಸಲಿದೆ.
Advertisement
VIDEO: Pooja Vastrakar's six leaves scoreboard in tatters.
She smashed a Jess Jonassen delivery in the 2nd ODI at Baroda so hard that it landed on the manual scoreboard leaving it in a big mess #INDvAUS – https://t.co/sKeun1YJhB
— BCCI Women (@BCCIWomen) March 15, 2018