ಮಂಡ್ಯ: ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಜಿಲ್ಲೆಯಲ್ಲಿ ಬಾಡಿಗೆ ಪಡೆದಿರುವ ಮನೆಯಲ್ಲಿ ಗಣಹೋಮ ಪೂಜೆ ನಡೆಯುತ್ತಿದೆ.
ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ 3ನೇ ಕ್ರಾಸ್ ನಿವಾಸದಲ್ಲಿ ಗಣಹೋಮ ನಡೆಯುತ್ತಿದ್ದು, ಅಂಬರೀಶ್ ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಇದೇ ಮನೆಯನ್ನು ಬಾಡಿಗೆ ಪಡೆದಿದ್ದರು. ಇದು ಅಂಬಿ ಪಾಲಿಗೆ ಅದೃಷ್ಟದ ಮನೆ ಎಂದೆ ಕರೆಯಲಾಗಿತ್ತು. ಹಾಗಾಗಿ ಇದೀಗ ಅದೇ ಮನೆಯನ್ನು ಸುಮಲತಾ ಬಾಡಿಗೆ ಪಡೆದಿದ್ದಾರೆ.
ಇಂದಿನಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡಲಿದ್ದಾರೆ. ಹೀಗಾಗಿ ಇಂದು ಮನೆಯಲ್ಲಿ ಗಣ ಹೋಮ ಪೂಜೆ ಮಾಡಲಾಗಿದೆ. ಈಗಾಗಲೇ ಪೂಜೆ ಶುರುವಾಗಿದ್ದು, ಪೂಜೆ ಬಳಿಕ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದ್ದೂರು ತಾಲೂಕಿ ಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಪ್ರಚಾರದಲ್ಲಿ ಅಮ್ಮನಿಗೆ ಅಭಿಷೇಕ್ ಸಾಥ್ ನೀಡಲಿದ್ದಾರೆ.
ಮತ್ತೊಂದೆಡೆ ಇಂದು ನಿಖಿಲ್ ಸಹ ಪ್ರಚಾರ ನಡೆಸುತ್ತಿದ್ದು, ಮೈಸೂರು ಜಿಲ್ಲೆಯ ಕೆ.ಆರ್ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ. ನಿಖಿಲ್‍ಗೆ ಸಚಿವ ಸಾರಾ ಮಹೇಶ್ ಸೇರಿ ಇತರರು ಸಾಥ್ ನೀಡಲಿದ್ದಾರೆ.