ಬಾಲಿವುಡ್‌ನಲ್ಲಿ ‘ರಾಧೆ ಶ್ಯಾಮ್’ ಸಿನಿಮಾ ಸುದ್ದಿಯಲ್ಲಿತು. ಆದರೆ ಈ ಸಿನಿಮಾ ರಿಲೀಸ್ ನಂತರ ಅಷ್ಟಾಗಿ ಪ್ರೇಕ್ಷಕನಿಗೆ ಇಷ್ಟವಾಗಲಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪೂಜಾ ಹೆಗ್ಡೆ ಮತ್ತು ಪ್ರಭಾಸ್ ಕುರಿತಾಗಿ ಹಲವು ಗಾಸಿಪ್‌ಗಳು ಹರಿದಾಡುತ್ತಿದ್ದವು. ಈ ವಿಚಾರಕ್ಕೆ ನಟಿ ಪೂಜಾ ಹೆಗ್ಡೆ ಬ್ರೇಕ್ ಹಾಕಿದ್ದಾರೆ.
ರಾಧೆ ಶ್ಯಾಮ್ ಸಿನಿಮಾ ಪ್ರಚಾರದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಇಬ್ಬರೂ ಸರಿಯಾಗಿ ತೊಡಗಿಸಿಕೊಂಡಿರಲಿಲ್ಲ. ಇವರ ಇಬ್ಬರ ಮಧ್ಯೆ ಏನೋ ಆಗಿದೆ. ಇಬ್ಬರ ಮಧ್ಯೆ ಮನಸ್ತಾಪ ಇದೆ ಎನ್ನುವ ಗುಸುಗಸು ಸುದ್ದಿಯೊಂದು ಹರಿದಾಡುತ್ತಿತ್ತು. ಬಾಲಿವುಡ್ ಅಂಗಳದಲ್ಲಿ ಹರಡಿದ್ದ ಈ ಸುದ್ದಿಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸೆಕ್ಸ್ ಮಾಡುವಂತೆ ಕೇಳುವುದೇ ಮೀಟೂ ಆದರೆ, ನಾನು ಅದನ್ನು ಕೇಳುತ್ತೇನೆ : ಖ್ಯಾತ ಖಳನಟನ ಶಾಕಿಂಗ್ ಮಾತು
ಪೂಜಾ ಹೇಳಿದ್ದೇನು?: ಸತ್ಯಕ್ಕೆ ದೂರವಾದ ಮಾತುಗಳನ್ನು ನಾನು ಕೇಳಿಸಿಕೊಳ್ಳುವುದಿಲ್ಲ, ನನಗೂ ಅದಕ್ಕೂ ಸಂಬಂಧವಿಲ್ಲ, ನಾನು ಏನಿದ್ದರೂ ಧನಾತ್ಮಕ ಚಿಂತನೆ ಮತ್ತು ನನ್ನ ವೃತ್ತಿಯ ಮೇಲೆ ಗಮನ ಕೇಂದ್ರೀಕರಿಸುತ್ತೇನೆ. ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಜನರು ಗಾಸಿಪ್ ಮಾಡಲು ಮತ್ತು ಕೇಳಲು ಇಷ್ಟಪಡುತ್ತಾರೆ. ಆದರೆ ಅದು ಹೆಚ್ಚು ಸಮಯ ಉಳಿಯುವುದಿಲ್ಲ. ನಾನು ನನ್ನ ಜೀವನದಲ್ಲಿ ಉತ್ತಮ ವಿಚಾರಗಳಿಗೆ ಮಾತ್ರ ಪ್ರಾಶಸ್ತ್ಯ ನೀಡುತ್ತೇನೆ ಎಂದು ಹೇಳುವ ಮೂಲಕವಾಗಿ ಸ್ಪಷ್ಟನೆ ನೀಡಿದ್ದಾರೆ.
ಏನೇ ಆಗಲಿ ಸಿನಿ ರಂಗದಲ್ಲಿ ಕೆಲವು ಸುದ್ದಿಗಳು ದೀಢಿರ್ ಎಂದು ಹಬ್ಬಿಕೊಳ್ಳುತ್ತವೆ. ಗಾಳಿ ಸುದ್ದಿಗಳು ನಟ, ನಟಿಯರು ಹೆಚ್ಚು ಗಮನ ಕೊಡಲು ಹೋಗುವುದಿಲ್ಲ. ಕೆಲವೊಮ್ಮೆ ಮಾಧ್ಯಮಗಳ ಎದುರು ಸ್ಪಷ್ಟನೆ ಕೊಟ್ಟು ಅಲ್ಲಿ ಬಿಟ್ಟಿ ಬಿಡುತ್ತಾರೆ. ಇದನ್ನೂ ಓದಿ: ‘ಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ