ಮುಂಬೈ: ಟಾಲಿವುಡ್ ಹಾಗೂ ಬಾಲಿವುಡ್‍ನಲ್ಲಿ ಸದ್ಯ ಬಹುಬೇಡಿಕೆಯಲ್ಲಿರುವ ನಟಿ ಪೂಜಾ ಹೆಗ್ಡೆಗೆ ಪಾಪರಾಜೀ ಫೋಟೋಗ್ರಾಫರ್‌ಗಳು ಸರ್ಪ್ರೈಸ್ ನೀಡಿದ್ದಾರೆ.
ಪೂಜಾ ಹೆಗ್ಡೆ ಇತ್ತೀಚೆಗಷ್ಟೇ ಸೈಮಾದಲ್ಲಿ ಅತ್ಯುತ್ತಮ ನಟಿ ಎರಡು ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಸೈಮಾ ಪ್ರಶಸ್ತಿ ಪಡೆದ ಪೂಜಾ ಹೆಗ್ಡೆಗಾಗಿ ಫೋಟೋಗ್ರಾಫರ್‌ಗಳು ಕೇಕ್ ತಂದಿದ್ದರು. ಫೋಟೋಗ್ರಾಫರ್ ಮತ್ತು ಕ್ಯಾಮರಾಮ್ಯಾನ್‍ಗಳ ಜೊತೆ ಕೇಕ್ ಕತ್ತರಿಸಿ ಪೂಜಾ ಹೆಗ್ಡೆ ಸಂಭ್ರಮಿಸಿದರು. ಇದನ್ನೂ ಓದಿ: Do not Disturb : ನಟಿ ರಾಗಿಣಿ ಪ್ರಜ್ವಲ್
ತಮಗಾಗಿ ಸರ್ಪ್ರೈಸ್ ನೀಡಿದ ಫೋಟೋಗ್ರಾಫರ್ ಮತ್ತು ಕ್ಯಾಮರಾಮ್ಯಾನ್‍ಗಳಿಗೆ ಪೂಜಾ ಹೆಗ್ಡೆ ಧನ್ಯವಾದಗಳನ್ನ ತಿಳಿಸಿದರು. ಕೇಕ್ ಕಟ್ ಮಾಡಿ ಸಂತೋಷ ಪಟ್ಟು ಕ್ಯಾಮರಾಕ್ಕೆ ಪೋಸ್ ಕೊಟ್ಟಿದ್ದಾರೆ.
ಪ್ರಶಸ್ತಿಗಳನ್ನು ಸ್ವೀಕರಿಸಿದ ನಟಿ ಪೂಜಾ ಹೆಗ್ಡೆ, ತಮ್ಮ ಸಂತಸವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ಶುಭಕೊರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ ಅತ್ಯಂತ ಸ್ಪೆಷಲ್ ಸಿನಿಮಾಗಳಲ್ಲಿ ಅಲಾ ವೈಕುಂಠಪುರಮುಲೋ ಕೂಡ ಒಂದು. ನನಗೆ ಪ್ರೀತಿ ತೋರಿಸಿದ ನನ್ನೆಲ್ಲಾ ಅಭಿಮಾನಿಗಳಿಗೆ ಧನ್ಯವಾದ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೂಜಾ ಹೆಗ್ಡೆ ಬರೆದುಕೊಂಡಿದ್ದರು.
View this post on Instagram
ಪೂಜಾ ಹೆಗ್ಡೆ ಜೀನ್ಸ್ ಪ್ಯಾಂಟ್ ತೊಟ್ಟು, ವರ್ಣರಂಜಿತವಾದ ಜಾಕೇಟ್ ತೊಟ್ಟು, ಡ್ರೆಸ್‍ಗೆ ಹೊಂದಿಕೆ ಯಾಗುವ ಒಂದು ಹ್ಯಾಂಡ್ ಬ್ಯಾಗ್ ಹಿಡಿದು ಸಿಂಪಲ್ ಲುಕ್‍ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.
ನಟಿ ಪೂಜಾ ಹೆಗ್ಡೆ ಮಹರ್ಷಿ, ಅಲಾ ವೈಕುಂಠಪುರಮುಲೋ, ಹೌಸ್‍ಫುಲ್ 4 ಸೇರಿದಂತೆ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.