ರಾಘವ್ ಲಾರೆನ್ಸ್ ನಟಿಸಿ, ನಿರ್ದೇಶನ ಮಾಡಿರುವ ಕಾಂಚನಾ ಸೀರಿಸ್‌ಗಳು ಸೂಪರ್ ಡೂಪರ್ ಹಿಟ್ ಆಗಿವೆ. ಇದೇ ಸಿನಿಮಾವನ್ನ ಬೇರೆ ಬೇರೆ ಭಾಷೆಯಲ್ಲೂ ರಿಮೇಕ್ ಕೂಡಾ ಮಾಡಲಾಗಿದೆ. ಈಗಾಗಲೇ ಮೂರು ಸೀರಿಸ್‌ಗಳಲ್ಲಿ ಕಮಾಲ್ ಮಾಡಿರುವ ಕಾಂಚನಾ ಪಾರ್ಟ್-4 ಸಿನಿಮಾ ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿದೆ. ಈ ಸಿನಿಮಾದ ಪಾತ್ರವರ್ಗಗಳ ಆಯ್ಕೆ ಭರ್ಜರಿಯಾಗಿಯೇ ನಡೆದಿದೆ.
ಕಾಂಚನ ಪಾರ್ಟ್-4 ಚಿತ್ರಕ್ಕೆ ಬಾಲಿವುಡ್‌ನ ಹಾಟ್ ಬ್ಯೂಟಿ, ಪಡ್ಡೆ ಹುಡುಗರ ಪಾಲಿನ ಪಾರಿಜಾತ ನೋರಾ ಫತೇಹಿ ಎಂಟ್ರಿಕೊಟ್ಟಿದ್ದಾರೆ. ನೋರಾ ಸೊಂಟ ಬಳುಕಿಸುವ ಮೂಲಕ ಫೇಮಸ್ ಆಗಿದ್ದಾರೆ. ಈ ಬಾರಿ ಕಾಂಚನಾ ಸೀರಿಸ್‌ನಲ್ಲಿ ಒಂದು ವಿಭಿನ್ನ ಪಾತ್ರವನ್ನ ನಿಭಾಯಿಸಲಿದ್ದಾರಂತೆ. ಮತ್ತೊಂದು ವಿಶೇಷ ಪಾತ್ರದಲ್ಲಿ ಸೌತ್ ಬ್ಯೂಟಿ ಪೂಜಾ ಹೆಗ್ಡೆ ನಟಿಸಲಿದ್ದಾರಂತೆ.
ಈ ಬಗ್ಗೆ ರಾಘವೇಂದ್ರ ಪ್ರೊಡಕ್ಷನ್ ಕಂಪನಿ ಅಧಿಕೃತ ಮಾಹಿತಿಯನ್ನ ಹಂಚಿಕೊಂಡಿದೆ. ಸದ್ಯದಲ್ಲಿಯೇ ಸಿನಿಮಾ ಶೂಟಿಂಗ್ ಆರಂಭಿಸಲಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.


