ಹೈದರಾಬಾದ್: ಟಾಲಿವುಡ್ ನಟಿ ಪೂಜಾ ಹೆಗ್ಡೆ ಮಾಲ್ಡೀವ್ಸ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಶೇರ್ ಮಾಡಿದ ಫೋಟೋ ನೋಡಿದ ಅಭಿಮಾನಿಗಳು ಫುಲ್ ಸುಸ್ತಾಗಿದ್ದಾರೆ.
ಮಾಲ್ಡೀವ್ಸ್ ಬೀಚ್ನಲ್ಲಿ ಕಾಲ ಕಳೆಯುತ್ತಿರುವ ಪೂಜಾ ಟು ಪೀಸ್ ಬಟ್ಟೆ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪೂಜಾ ಅವರ ಹಾಟ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್
ಕಳೆದ ಕೆಲವು ದಿನದಗಳ ಹಿಂದೆ ಪೂಜಾ ಮಾಲ್ಡೀವ್ಸ್ಗೆ ಭೇಟಿ ನೀಡಿ ಸಖತ್ ಎಂಜಾಯ್ ಮಾಡಿ ಮನೆಗೆ ವಾಪಸಾಗಿ ಒಂದು ವಾರ ಕಳೆದಿದೆ. ಆದರೆ ಪೂಜಾ ಅವರ ಮನಸ್ಸು ಮಾತ್ರ ಮಾಲ್ಡೀವ್ಸ್ನಲ್ಲಿಯೇ ಇದೆ. ಇನ್ಸ್ಟಾಗ್ರಾಮ್ನಲ್ಲಿ ಮಾಲ್ಡೀವ್ಸ್ ಡೈರಿಯ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪೂಜಾ ಅವರ ಫೋಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ.
View this post on Instagram
ಪೂಜಾ ಹೆಗ್ಡೆ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜನವರಿ 14 ರಂದು ರಾಧೆ ಶ್ಯಾಮ್ ಸಿನಿಮಾ 5 ಭಾಷೆಯಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮೂಂದುಡಲ್ಪಟ್ಟಿದೆ. ಆಚಾರ್ಯ, ಬೀಸ್ಟ್, ಸರ್ಕಸ್ ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ರಿಲೀಸ್ಗೆ ಈ ಎಲ್ಲಾ ಸಿನಿಮಾಗಳು ತಯಾರಾಗಿವೆ.