ಕರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಅವರು ‘ಕೂಲಿ’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ‘ಕೂಲಿ’ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಪೂಜಾ ಹೆಗ್ಡೆಗೆ ಸಕ್ಸಸ್ ಸಿಗದೇ ಇದ್ದರೂ ಸಿನಿಮಾ ಅವಕಾಶಗಳ ಕೊರತೆಯಿಲ್ಲ. ಯಶಸ್ಸಿಗಾಗಿ ಎದುರು ನೋಡುತ್ತಿರುವ ಪೂಜಾ ಹೆಗ್ಡೆ ಇದೀಗ ರಜನಿಕಾಂತ್ ನಟನೆಯ ಚಿತ್ರಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸುದ್ದಿಯನ್ನು ಸ್ವತಃ ‘ಕೂಲಿ’ (Coolie) ಚಿತ್ರತಂಡವೇ ತಿಳಿಸಿದೆ.
View this post on Instagram
ಲೋಕೇಶ್ ಕನಕರಾಜ್ ‘ಕೂಲಿ’ ಚಿತ್ರದಲ್ಲಿ ತಲೈವಾ ಜೊತೆ ಪೂಜಾ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಈ ಚಿತ್ರದಲ್ಲಿ ಸೊಂಟ ಬಳುಕಿಸಲು ನಟಿ ದುಬಾರಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಇನ್ನೂ ಕೆರಿಯರ್ ಬ್ರೇಕ್‌ಗಾಗಿ ನಟಿ ಹೊಸ ಹೆಜ್ಜೆ ಇಟ್ಟಿದ್ದು, ಐಟಂ ಸಾಂಗ್ ಮೂಲಕ ಸಕ್ಸಸ್ ಸಿಗುತ್ತಾ? ಎಂದು ಕಾಯಬೇಕಿದೆ.