ಕರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಸದ್ಯ ಶಾರುಖ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದ ವೇಳೆ, ಸಲ್ಮಾನ್ ಖಾನ್ (Salman Khan) ಜೊತೆಗಿನ ಡೇಟಿಂಗ್ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ರಶ್ಮಿಕಾಗೆ ಗಡ್ಡ ಬೆಳೆದಿದೆ ಎಂದು ಮಾರ್ಕ್ ಮಾಡಿ ಕಾಲೆಳೆದ ಅಭಿಮಾನಿ
Advertisement
‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದಲ್ಲಿ ಸಲ್ಮಾನ್ ಖಾನ್ಗೆ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚಿಗೆ ಚಿತ್ರದ ‘ಯೆಂಟಮ್ಮಾʼ ಸಾಂಗ್ ರಿಲೀಸ್ ಆಗಿ ಅಭಿಮಾನಿಗಳ ಗಮನ ಸೆಳೆದಿತ್ತು. ರಾಮ್ ಚರಣ್- ವೆಂಕಟೇಶ್ (Venkatesh) ಕೂಡ ಈ ಹಾಡಿಗೆ ಮಸ್ತ್ ಆಗಿ ಹೆಜ್ಜೆ ಹಾಕಿದ್ದರು. ಈ ಸಾಂಗ್ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿತ್ತು. ಬಳಿಕ ಚಿತ್ರದ ಟ್ರೈಲರ್ಗೆ ವ್ಯಾಪಕ ಮೆಚ್ಚುಗೆ ಅಭಿಮಾನಿಗಳಿಂದ ವ್ಯಕ್ತವಾಗಿತ್ತು.
Advertisement
Advertisement
ಸಲ್ಮಾನ್ ಖಾನ್ ಅವರ ಹೆಸರು ಸಾಕಷ್ಟು ನಟಿಮಣಿಯರ ಜೊತೆ ತಳುಕು ಹಾಕಿಕೊಂಡಿದೆ. ಸಾಕಷ್ಟು ನಟಿಯರ ಜೊತೆ ಡೇಟ್ ಮಾಡಿದ್ದಾರೆ. ಮದುವೆವರೆಗೂ ಹೋಗಿ ಕೈ ತಪ್ಪಿದೆ. ಯಾಕೆ ಎಂಬ ವಿಚಾರ ಇದುವರೆಗೂ ತಿಳಿದುಬಂದಿಲ್ಲ. ಕೆಲ ತಿಂಗಳುಗಳಿಂದ ನಟಿ ಪೂಜಾ ಹೆಗ್ಡೆ ಜೊತೆ ಸಲ್ಮಾನ್ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡಿತ್ತು. ಈಗ ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ.
Advertisement
ನಾನು ಸಿಂಗಲ್, ನನ್ನ ಕೆರಿಯರ್ ಮೇಲೆ ಸಂಪೂರ್ಣ ಗಮನ ಹರಿಸುತ್ತಿದ್ದೇನೆ ಎಂದು ಸಲ್ಮಾನ್ ಜೊತೆಗಿನ ಡೇಟಿಂಗ್ ಸುದ್ದಿಗೆ ಪೂಜಾ ಬ್ರೇಕ್ ಹಾಕಿದ್ದಾರೆ. ನನ್ನ- ಸಲ್ಮಾನ್ ಖಾನ್ ನಡುವೆ ಉತ್ತಮ ಸ್ನೇಹವಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ಪೂಜಾ ನಟನೆಯ ಸಾಲು ಸಾಲು ಸಿನಿಮಾಗಳು ಗಲ್ಲಾಪಟ್ಟಿಗೆಯಲ್ಲಿ ಕಲೆಕ್ಷನ್ ಮಾಡಿರೋದ್ರಲ್ಲಿ ಸೋತಿದೆ. ಹಾಗಾಗಿ ಕರಾವಳಿ ಸುಂದರಿಗೆ ಈಗ ಗೆಲುವಿನ ಅವಶ್ಯಕತೆಯಿದೆ. Kisi Ka Bhai Kisi Ki Jaan ಸಿನಿಮಾ ಕೈ ಹಿಡಿಯುತ್ತಾ ಎಂಬುದನ್ನ ಕಾದುನೋಡಬೇಕಿದೆ.