‘ಮುಂಗಾರು ಮಳೆ’ ನಟಿ ಪೂಜಾ ಗಾಂಧಿ (Pooja Gandhi) ಅವರು ಪತಿ ವಿಜಯ್ (Vijay) ಜೊತೆ ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಯ ಆಶೀರ್ವಾದವನ್ನು ಪಡೆದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಬಸವೇಶ್ವರ ಪುತ್ಥಳಿಗೆ ಪೂಜಾ ಗಾಂಧಿ ದಂಪತಿ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ:ದೊಡ್ಮನೆಯ ಮೊದಲ ಎಲಿಮಿನೇಷನ್- ಪ್ರಬಲ ಸ್ಪರ್ಧಿಯೇ ಔಟ್?
ಮದುವೆಯಾದ ಬಳಿಕ ಪತಿ ಜೊತೆ ಪೂಜಾ ಗಾಂಧಿ ಲಂಡನ್‌ಗೆ ಹಾರಿದ್ದಾರೆ. ಅಲ್ಲಿ ಲಂಡನ್‌ನಲ್ಲಿರುವ 2 ಪ್ರಮುಖ ಕನ್ನಡ ಸಂಸ್ಥೆಗಳಾದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಬಸವ ಸಮಿತಿ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ, ಪೂಜಾ ಗಾಂಧಿ ಅವರು ಬಸವೇಶ್ವರ ಪುತ್ಥಳಿಗೆ ಗೌರವ ಸಲ್ಲಿಸಿದರು. 12ನೇ ಶತಮಾನದಲ್ಲಿ ಮಾನವ ಹಕ್ಕುಗಳು, ಲಿಂಗ ಸಮಾನತೆ ಮತ್ತು ಜಾತಿ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು. ತನಗೆ ಬಸವಣ್ಣನ ಬಗ್ಗೆ ಅಪಾರ ಅಭಿಮಾನವಿದೆ ಮತ್ತು ಅವರ ಬೋಧನೆಗಳ ಸಮರ್ಪಿತ ಅನುಯಾಯಿ ಎಂದು ಅವರು ಹೇಳಿದರು.