ಮುಂಬೈ: ನವರಾತ್ರಿ ಆಚರಣೆಯ ಭಾಗವಾಗಿ ಹೌರಾದ ಮೆಟ್ರೋ ರೈಲ್ಲಿನಲ್ಲಿ ʻಜೈ ಶ್ರೀರಾಮ್ʼ (Jai Shree Ram) ಘೋಷಣೆ ಕೂಗುತ್ತಾ ಭಜನೆ ಮಾಡಲಾಗುತ್ತಿತ್ತು. ಈ ದೃಶ್ಯವನ್ನು ಕಂಡು ತೀವ್ರವಾಗಿ ಟೀಕಿಸಿದ್ದ ಬಿಗ್ ಬಾಸ್ ತಾರೆ ಪೂಜಾ ಭಟ್‌ಗೆ (Pooja Bhatt) ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
This, truly, is what Hindutva Pop music has been designed for–the easy appeal that it creates among various classes, across the rural & urban.
Well-heeled, upper-class youngsters, seeing no problem in singing this in a metro. H-Pop is everywhere.pic.twitter.com/X4K3wSTWBA
— Kunal Purohit (@kunalpurohit) October 13, 2024
ಮೆಟ್ರೋ ರೈಲಿಯಲ್ಲಿ (Mumbai Metro Train) ಶ್ರೀರಾಮನ ಭಜನೆ ಮಾಡುತ್ತಿದ್ದ ವೀಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ನಟಿ, ಇದು ಸಾರ್ವಜನಿಕ ಸ್ಥಳದ ದುರುಪಯೋಗ. ಇಂತಹದ್ದಕ್ಕೆ ಟ್ರೈನ್‌ಗಳಲ್ಲಿ ಏಕೆ ಅನುಮತಿ ನೀಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ನಟಿ ಟ್ವೀಟ್ ಮಾಡಿದ ಬಳಿಕ ಕೆಲ ನೆಟ್ಟಿಗರು ಆಕೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ, ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ: ದುರ್ಗಾದೇವಿ ಮೂರ್ತಿ ವಿರ್ಸಜನೆ| ಮಸೀದಿ ಎದುರು ಹಾಡು ಹಾಕಿದ್ದಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ
ಪೂಜಾ ಭಟ್ ಹೇಳಿದ್ದೇನು?
ಸಾರ್ವಜನಿಕ ಸ್ಥಳದಲ್ಲಿ ಇದನ್ನು ಹೇಗೆ ಅನುಮತಿಸಲಾಗಿದೆ? ಅದು ಹಿಂದುತ್ವದ ಪಾಪ್, ಕ್ರಿಸ್‌ಮಸ್ ಕರೋಲ್‌ಗಳು, ಬಾಲಿವುಡ್ ಬ್ಲಾಕ್‌ಬಸ್ಟರ್‌ಗಳು ಅಥವಾ ಯಾವುದೇ ಸಂಗೀತ ಆಗಿರಲಿ, ಸಾರ್ವಜನಿಕ ಸ್ಥಳಗಳನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುವಂತಿಲ್ಲ. ಅಧಿಕಾರಿಗಳು ಇದನ್ನು ಹೇಗೆ ಮತ್ತು ಏಕೆ ಅನುಮತಿಸುತ್ತಿದ್ದಾರೆ? ಎಂದು ಹೇಳಿದ್ದರು. ಇದನ್ನೂ ಓದಿ: Uttar Pradesh | ದುರ್ಗಾದೇವಿ ಮೂರ್ತಿ ವಿರ್ಸಜನೆ ವೇಳೆ ಕೋಮು ಸಂಘರ್ಷ – ಲಾಠಿ ಚಾರ್ಜ್, 30 ಮಂದಿ ಬಂಧನ
ನಟಿಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕುನಾಲ್ ಪುರೋಹಿತ್ ಎಂಬವರು, ನವರಾತ್ರಿ ಆಚರಣೆಗಾಗಿಯೇ ಹಿಂದುತ್ವದ ಪಾಪ್ ಸಂಗೀತವನ್ನು ವಿನ್ಯಾಸಗೊಳಿಸಲಾಗಿದೆ. ಇದು ಗ್ರಾಮೀಣ ಮತ್ತು ನಗರಗಳಾದ್ಯಂತ ವಿವಿಧ ವರ್ಗಗಳ ಜನರನ್ನ ಸುಲಭವಾಗಿ ಆಕರ್ಷಿಸುತ್ತದೆ. ಮೆಟ್ರೋದಲ್ಲಿ ಇದನ್ನ ಹಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಅಲ್ಲದೇ ಮುಂಚಿತವಾಗಿ ಇದಕ್ಕಾಗಿಯೇ ಮೆಟ್ರೋವನ್ನ ಕಾಯ್ದಿರಿಸಲಾಗಿತ್ತು ಎಂದೂ ಸ್ಪಷ್ಟನೆ ನೀಡಿದ್ದಾರೆ.
ನಟಿ ಪೂಜಾ ಭಟ್ ಬಿಗ್ ಬಾಸ್ ಒಟಿಟಿ-2 ರಿಯಾಲಿಟಿ ಶೋ ಮೂಲಕ ಸಿನಿ ಜಗತ್ತಿಗೆ ಪ್ರವೇಶಿಸಿದರು. ನಂತರ ಬಿಗ್ ಗರ್ಲ್ಸ್ ಡೋಂಟ್ ಕ್ರೈ ಶೋ ವೆಬ್‌ಸಿರೀಸ್ ಕಾಣಿಸಿಕೊಂಡರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್, ಸಿದ್ದರಾಮಯ್ಯ ಮುಸಲ್ಮಾನರ ಬಿಗ್ ಬಾಸ್: ಅಶೋಕ್ ಲೇವಡಿ