CinemaLatestMain PostSouth cinema

ಸಿನಿಮಾ ಒಂದು ಚಿಕ್ಕ ಕುಟುಂಬ, ಇಲ್ಲಿ ಅಸೂಯೆಗೆ ಜಾಗವಿಲ್ಲ: ಕಮಲ್ ಹಾಸನ್

ಕಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ `ಪೊನ್ನಿಯನ್ ಸೆಲ್ವನ್'(Ponniyin Selvan) ಚಿತ್ರ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಈ ಚಿತ್ರದ ಅದ್ದೂರಿ ಇವೆಂಟ್‌ನಲ್ಲಿ ರಜನಿಕಾಂತ್(Rajanikanth) ಮತ್ತು ಕಮಲ್ ಹಾಸನ್ (Kamal Haasan) ಕೂಡ ಭಾಗವಹಿಸಿ, ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ.

ಮಣಿರತ್ನಂ (Mani Ratnam) ನಿರ್ದೇಶನದ `ಪೊನ್ನಿಯನ್ ಸೆಲ್ವನ್’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಹೈಲೈಟ್ ಆಗಿದ್ದರು. ಈ ವೇಳೆ ರಜನಿಕಾಂತ್ ಜತೆಗಿನ ಸ್ನೇಹ ಮತ್ತು ಸಿನಿಮಾ ಕುಟುಂಬವನ್ನ ಉದ್ದೇಶಿಸಿ ಕಮಲ್ ಹಾಸನ್ ಮಾತನಾಡಿದ್ದಾರೆ. ಇದನ್ನೂ ಓದಿ:`ಪೊನ್ನಿಯನ್ ಸೆಲ್ವನ್’ ಇವೆಂಟ್‌ನಲ್ಲಿ ಬ್ಲ್ಯಾಕ್ ಬ್ಯೂಟಿಯಾಗಿ ಮಿಂಚಿದ ಐಶ್ವರ್ಯಾ ರೈ

40 ವರ್ಷಗಳಿಂದ ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರು ಸ್ನೇಹಿತರು. ನಮ್ಮ ನಡುವೆ ಅಸೂಯೆಗೆ ಜಾಗವಿಲ್ಲ. ಸಿನಿಮಾ ಒಂದು ಕುಟುಂಬ, ಇಲ್ಲಿ ಅಸೂಯೆಗೆ ಜಾಗವಿಲ್ಲ ಎಂದು ನಟ ಕಮಲ್ ಮಾತನಾಡಿದ್ದಾರೆ. ಇನ್ನು 30 ವರ್ಷಗಳ ಹಿಂದೆಯೇ `ಪೊನ್ನಿಯನ್ ಸೆಲ್ವನ್’ ಚಿತ್ರವನ್ನು ಕಮಲ್ ಮತ್ತು ರಜನಿಕಾಂತ್ ಒಟ್ಟಿಗೆ ಮಾಡಲು ನಿರ್ಧರಿಸಲಾಗಿತ್ತು ಎಂಬ ವಿಚಾರ ಈ ಇವೆಂಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.

Live Tv

Leave a Reply

Your email address will not be published.

Back to top button