ಮಣಿರತ್ನಂ (Mani Ratnam) ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಪೊನ್ನಿಯಿನ್ ಸೆಲ್ವನ್ 2’ (Ponniyin Selvan) ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು, ತುಂಬಿದ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ಚಿತ್ರಕ್ಕೆ ಅತ್ಯದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮಣಿರತ್ನಂ ಅವರ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಒಂದು ಎಂದು ಬಣ್ಣಿಸಲಾಗುತ್ತಿದೆ. ಆದರೆ, ತಮಿಳಿನ ಖ್ಯಾತ ಲೇಖಕ ಮುರುಗವೇಲು (Murugavelu) ನಿರ್ದೇಶಕ ಮಣಿರತ್ನಂ ವಿರುದ್ಧ ಕಿಡಿಕಾರಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಸುಳ್ಳು ಕಥೆಯನ್ನು ಹೇಳುವ ಸಿನಿಮಾ. ಇತಿಹಾಸವನ್ನು ತಿರುಚಲಾಗಿದೆ. ಅಲ್ಲದೇ ಮಣಿರತ್ನಂ ಈ ಸಿನಿಮಾದಲ್ಲಿ ಹಿಂದುತ್ವವನ್ನು (Hindutva) ಹೇರಿಕೆ ಮಾಡಿದ್ದಾರೆ. ಪೊನ್ನಿಯಿನ್ ಸೆಲ್ವನ್ ಕಾದಂಬರಿಯಲ್ಲಿ ಕಲ್ಕಿ ಬರೆದಿದ್ದೇ ಬೇರೆ, ಸಿನಿಮಾದಲ್ಲಿ ತೋರಿಸಿದ್ದೇ ಬೇರೆ. ಮಂದಾಕಿನಿ ಸ್ವಾತಂತ್ರ್ಯವನ್ನು ನಿರ್ದೇಶಕರಿಗೆ ಸಹಿಸಿಕೊಳ್ಳಲು ಆಗಿಲ್ಲ. ಮಹಿಳೆಯರು ಬೇರೆ ಪುರುಷನ ಬಗ್ಗೆ ಯೋಚಿಸಬಾರದು ಎನ್ನುವ ಕೆಟ್ಟ ಸಂದೇಶವನ್ನು ಸಾರಿದ್ದಾರೆ ಎಂದಿದ್ದಾರೆ ಲೇಖಕ ಮುರುಗವೇಲು.
ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಸ್ಟಾರ್ ತಾರಾಬಳಗವಿರುವ ಸಿನಿಮಾ ‘ಪೊನ್ನಿಯಿನ್ ಸೆಲ್ವನ್ -2’. ಕಾರ್ತಿ (Karthi), ಐಶ್ವರ್ಯಾ ರೈ (Aishwarya Rai), ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಚಿತ್ರದಲ್ಲಿದೆ. ಇದನ್ನೂ ಓದಿ:ಹೊಸ ಪ್ರಾಜೆಕ್ಟ್‌ನಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಸಮಂತಾ- ಅನುಷ್ಕಾ ಶರ್ಮಾ
ಮಣಿರತ್ನಂ ನಿರ್ದೇಶನ ಒಂದು ಶಕ್ತಿಯಾದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್, ಸ್ಟಾರ್ ಹಾಗೂ ಅನುಭವಿ ಕಲಾವಿದರ ನಟನೆ, ಅದ್ದೂರಿ ಮೇಕಿಂಗ್ ಎಲ್ಲವೂ ಸೀಕ್ವೆಲ್ 2 ಮೇಲೆ ನಿರೀಕ್ಷೆ ಹೆಚ್ಚಿಸಿತ್ತು. ನಿರೀಕ್ಷೆಯನ್ನು ನಿರ್ದೇಶಕರು ತುಂಬಿಕೊಟ್ಟಿದ್ದಾರೆ.