ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರೀಕ್ಷಿತ ಸಿನಿಮಾ ಪೊನ್ನಿಯನ್ ಸೆಲ್ವನ್ ಇದೀಗ ವಿವಾದಕ್ಕೀಡಾಗಿದೆ. ಟೀಸರ್ ಬಗ್ಗೆ ಅಪಾರ ಮೆಚ್ಚುಗೆ ಬಂದ ಹಿನ್ನೆಲೆಯಲ್ಲಿ ಸಂಭ್ರಮಿಸಬೇಕಾಗಿದ್ದ ಚಿತ್ರತಂಡ ಇದೀಗ ಆತಂಕಕ್ಕೊಳಗಾಗಿದೆ. ಚೋಳರ ಇತಿಹಾಸವನ್ನು ಹೇಳಲು ಹೊರಟಿರುವ ನಿರ್ದೇಶಕರು, ಆ ಇತಿಹಾಸವನ್ನು ತಿರುಚಿದ್ದಾರೆ ಎಂದೆ ಸೆಲ್ವನ್ ಅನ್ನುವವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಹಾಗಾಗಿ ನಿರ್ದೇಶಕ ಮಣಿರತ್ನಂ ಮತ್ತು ವಿಕ್ರಮ್ ಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
Advertisement
ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಚೋಳ ಸಾಮ್ರಾಜ್ಯದ ಉಗಮ ಮತ್ತು ಅದು ಬೆಳೆದು ಬಂದ ಇತಿಹಾಸವನ್ನು ಹೇಳಲು ಹೊರಟಿದ್ದಾರೆ ಮಣಿರತ್ನಂ. ಆದರೆ, ನಿಜ ಇತಿಹಾಸವನ್ನು ಅವರು ಹೇಳುತ್ತಿಲ್ಲ ಎಂದು ಉದಾಹರಣೆ ಸಮೇತ, ಕೋರ್ಟ್ ಮೆಟ್ಟಿಲು ಏರಿದ್ದಾರೆ ಸೆಲ್ವನ್. ಈ ಸಿನಿಮಾದಲ್ಲಿ ನಟ ವಿಕ್ರಮ್ ಅವರು, ಆದಿತ್ಯ ಕರಿಕಾಲನ್ ಪಾತ್ರದಲ್ಲಿ ನಟಿಸಿದ್ದು, ರಿಲೀಸ್ ಆದ ಪೋಸ್ಟರ್ ನಲ್ಲಿ ಅವರ ಹಣೆ ಮೇಲೆ ತಿಲಕವಿದೆ. ಟೀಸರ್ ನಲ್ಲಿ ತಿಲಕವಿಲ್ಲ ಎಂದು. ಹೀಗಾಗಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:ಬ್ರೇಕಪ್ ನಂತರ ಸ್ಟಾರ್ ನಟಿ ಸಹೋದರನ ಜೊತೆ ಇಲಿಯಾನಾ ಡೇಟಿಂಗ್
Advertisement
Advertisement
ಕೋರ್ಟ್ ನೋಟಿಸ್ ಜಾರಿಯಾಗಿದ್ದರೂ, ಈ ಕುರಿತು ಮಣಿರತ್ನಂ ಆಗಲಿ, ವಿಕ್ರಮ್ ಆಗಲಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅಲ್ಲದೇ, ಸಿನಿಮಾ ರಿಲೀಸ್ ಗೂ ತಮಗೆ ಆ ಸಿನಿಮಾವನ್ನು ತೋರಿಸಬೇಕು ಎಂದು ಸೆಲ್ವನ್ ದೂರಿನಲ್ಲಿ ಬರೆದ್ದಾರೆ. ಆದರೆ, ಈ ಕುರಿತು ಮಣಿರತ್ನಂ ಅವರು ಯಾವುದೇ ನಿರ್ಧಾರ ತಗೆದುಕೊಂಡಿಲ್ಲ. ಐದು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಐಶ್ವರ್ಯಾ ರೈ, ಕಾರ್ತಿ, ತ್ರಿಶಾ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ.