ನವದೆಹಲಿ: ಮಾಲಿನ್ಯ ನಿಯಂತ್ರಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಮತ್ತೆ ಕೆಲ ದಿನಗಳವರೆಗೆ ಸಮ ಬೆಸ ಸಂಖ್ಯೆ ವಾಹನ ಸಂಚಾರ ವ್ಯವಸ್ಥೆ ಜಾರಿಯಾಗಲಿದೆ.
ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸುದ್ದಿಗೋಷ್ಠಿ ನಡೆಸಿ ನವೆಂಬರ್ 4 ರಿಂದ 15 ರವರೆಗೆ ಈ ಪದ್ದತಿ ಇರಲಿದೆ ಎಂದು ತಿಳಿಸಿದರು.
Advertisement
ನವೆಂಬರ್ ತಿಂಗಳಿನಲ್ಲಿ ದೀಪಾವಳಿ ಹಬ್ಬ ಇರುವ ಕಾರಣ ಜಾಸ್ತಿ ಮಾಲಿನ್ಯ ಉಂಟಾಗಿ ಉಸಿರಾಡಲು ಕಷ್ಟವಾಗುತ್ತದೆ. ಹೀಗಾಗಿ ಮಾಲಿನ್ಯವನ್ನ ನಿಯಂತ್ರಿಸಲು ಈ ಕ್ರಮ ಅನಿವಾರ್ಯ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
Advertisement
Delhi CM Arvind Kejriwal: There has been improvement in Delhi's traffic ever since the new Motor Vehicle Act has been implemented. If there is any clause due to which people are facing more problem and we have the power reduce the fine then we will certainly do it. pic.twitter.com/DpJx2Kyz43
— ANI (@ANI) September 13, 2019
Advertisement
ಈ ಸಂದರ್ಭದಲ್ಲಿ ಪಟಾಕಿ ಹೊಡೆಯದಂತೆ ಜನತೆಯಲ್ಲಿ ಮನವಿ ಮಾಡಿದ ಅವರು ಸರ್ಕಾರದ ವತಿಯಿಂದ ಲೇಸರ್ ಶೋ ಆಯೋಜಿಸಲಾಗುವುದು ಎಂದು ತಿಳಿಸಿದರು.
Advertisement
ದೂಳಿನ ಸಮಸ್ಯೆ ನಿವಾರಣೆಗೆ ನಗರದ ಹಲವು ಕಡೆ ನೀರನ್ನು ಸಿಂಪಡಿಸಲಾಗುತ್ತಿದೆ. ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ನಂತರ ನಗರದ ಟ್ರಾಫಿಕ್ ಬಹಳ ಸುಧಾರಣೆಯಾಗಿದೆ. ಜನರಿಗೆ ದಂಡ ಕಟ್ಟಲು ಸಾಧ್ಯವಾಗದಿದ್ದರೆ ದಂಡದ ಮೊತ್ತವನ್ನು ಇಳಿಸಲಾಗುವುದು ಎಂದು ಹೇಳಿದರು.
Union Transport Minister Nitin Gadkari on Odd-Even scheme: No I don't think it is needed. The Ring Road we have built has significantly reduced pollution in the city and our planned schemes will free Delhi of pollution in the next two years. pic.twitter.com/X7b6XwkyME
— ANI (@ANI) September 13, 2019