ಬೆಂಗಳೂರು: ಸೌಂಡಿಲ್ಲದೇ ಮದ್ವೆ ಆಗ್ರಪ್ಪ…! ವಾಲಗದ ಸದ್ದು ನಾದಸ್ವರದ ಸದ್ದಿದೊಂದಿಗೆ ಮದ್ವೆ ಆದರೆ ಕೇಸ್ ಹಾಕೋದಕ್ಕೆ ಅಧಿಕಾರಿಗಳು ರೆಡಿಯಾಗಿದ್ದಾರೆ. ಮದುವೆಯಲ್ಲಿ ಸಂಗೀತ ಇರಲೇಬೇಕು. ಮಾಂಗಲ್ಯಧಾರಣೆ ವೇಳೆ ಗಟ್ಟಿಮೇಳ ಆಗಲೇಬೇಕು. ಈ ಸಂಗೀತದಿಂದ ಶಬ್ಧ ಮಾಲಿನ್ಯ ಆಗುತ್ತೆ ಎಂದು ಅಧಿಕಾರಿಗಳು ಮದುವೆ ನಡೆಯುವ ಹೋಟೆಲ್ ಗೆ ನೋಟಿಸ್ ನೀಡಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಫೇಮಸ್ ಜಯಮಹಲ್ ಹೋಟೆಲ್‍ಗೆ ನೋಟಿಸ್ ನೀಡಿದೆ. ಬೆಂಗಳೂರಿನ ರಸ್ತೆಯ ಕೆಟ್ಟು ಹೋದ ವಾಹನ, ಕಾರ್ಖನೆಗಳಿಂದ ಶಬ್ಧ ಮಾಲಿನ್ಯವಾಗ ಆಗಲ್ವಂತೆ. ಮದುವೆಯಲ್ಲಿ ಬಳಸುವ ಸಂಗೀತದಿಂದ ಸಿಕ್ಕಾಪಟ್ಟೆ ಶಬ್ಧಮಾಲಿನ್ಯ ಆಗುತ್ತಿದೆ ಎಂದು ಅಧಿಕಾರಿಗಳು ಹೋಟೆಲ್ ಗೆ ನೋಟಿಸ್ ನೀಡಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಟ್ರಾಫಿಕ್‍ನಲ್ಲಿ ಕರ್ಕಶ ಶಬ್ಧ ಮಾಡ್ಕೊಂಡು ಓಡಾಡುವ ವಾಹನ, ಕೆಟ್ಟ ಶಬ್ಧ ಬರುವ ಕಾರ್ಖಾನೆಗಳ ಬಗ್ಗೆ ಕ್ಯಾರೆ ಮಾಡದೇ ಮದ್ವೆ ವಾಲಗ ಸದ್ದು, ರಿಸೆಪ್ಶನ್ ಫಂಕ್ಷನ್‍ನಲ್ಲಿ ಹಾಕುವ ಲೈಟ್ ಮ್ಯೂಸಿಕ್‍ನ ಬಗ್ಗೆ ಹೆವ್ವಿ ತಲೆಕೆಡಿಸಿಕೊಂಡಿದೆ.
Advertisement
Advertisement
ಬೆಂಗಳೂರಿನ ಕಂಟೋನ್ಮೆಂಟ್‍ನಲ್ಲಿರುವ ಜಯಮಹಲ್ ಹೋಟೆಲ್‍ನಲ್ಲಿ ಮದುವೆ, ಆರತಕ್ಷತೆಯಿಂದ ಶಬ್ಧ ಮಾಲಿನ್ಯವಾಗುತ್ತಿದೆ ಅಂತಾ ನೋಟಿಸ್ ನೀಡಲಾಗಿದೆ. ನೋಟಿಸ್ ನೋಡಿ ತಬ್ಬಿಬ್ಬಾಗಿರುವ ಹೋಟೆಲ್‍ನವರು, ಮದುವೆ ವಾಲಗದ ಸೌಂಡ್‍ಗೆ ನೋಟಿಸ್ ಕೊಟ್ರೇ ಹೇಗೆ? ವಾಲಗ, ನಾದಸ್ವರ, ಲೈಟ್ ಮ್ಯೂಸಿಕ್ ಇಲ್ಲದೇ ಇದ್ರೆ ಮದುವೆ ಹೇಗೆ ಅಂತಾ ಪ್ರಶ್ನಿಸಿದ್ದಾರೆ.
Advertisement
ಅಧಿಕಾರಿಗಳು ನೋಟಿಸ್ ನೀಡಿದ್ದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv