ರಾಯಚೂರು: ಎಲ್ಲಾ ಲೂಟಿಯಾದ ಮೇಲೆ ಕೋಟೆ ಬಾಗಿಲು ಹಾಕಿದ ಹಾಗೆ ರಾಯಚೂರು ನಗರಸಭೆ ಈಗ ಎಚ್ಚೆತ್ತಿದೆ. ನಗರದ ಟ್ಯಾಂಕ್‍ಗಳ ಶುದ್ಧೀಕರಣದ ಬಗ್ಗೆ ಈಗ ಅರಿವಿಗೆ ಬಂದಿದೆ. ಕಲುಷಿತ ನೀರು ಕುಡಿದು ಮೂವರು ಸಾವನ್ನಪ್ಪಿದ ಬಳಿಕ ತುರ್ತು ಸಭೆ ಕರೆದು ಪರಿಹಾರ ಘೋಷಣೆ ಮಾಡಿದ್ದಾರೆ.
Advertisement
ರಾಯಚೂರು ನಗರಸಭೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಕೊನೆಯೇ ಇಲ್ಲ ಎನ್ನುವುದಕ್ಕೆ ಇಂದು ನಡೆದ ನಗರಸಭೆ ಸದಸ್ಯರ ತುರ್ತು ಸಭೆ ಸಾಕ್ಷಿಯಾಗಿತ್ತು. ನಗರಸಭೆಯಿಂದ ಸರಬರಾಜಾದ ಕಲುಷಿತ ನೀರನ್ನು ಕುಡಿದು ಮೂರು ಜನ ಪ್ರಾಣ ಬಿಟ್ಟಿದ್ದರ ಹಿಂದೆ 25 ವರ್ಷಗಳ ನಿರ್ಲಕ್ಷ್ಯವಿದೆ. ನೀರು ಕುಡಿದ ನೂರಾರು ಜನ ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿರುವುದರ ಹಿಂದೆ ಭ್ರಷ್ಟಾಚಾರ, ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಕೊನೆಗೂ ಎಚ್ಚೆತ್ತಂತೆ ತುರ್ತು ಸಭೆ ಕರೆದ ಆಡಳಿತ ಮಂಡಳಿ ನಗರಸಭೆ ನೀರು ಕುಡಿದು ಸಾವನ್ನಪ್ಪಿದ ಮೂವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 20 ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚ ಭರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: ಡೊಳ್ಳು ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ : ದಾಖಲೆಯ ರೀತಿಯಲ್ಲಿ ಪ್ರಶಸ್ತಿ ಪಡೆದ ಪವನ್ ಒಡೆಯರ್
Advertisement
Advertisement
ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಆಡಳಿತ ಮಂಡಳಿ ವೈಫಲ್ಯದ ಬಗ್ಗೆ ಕಿಡಿಕಾರಿದರು. ಶುದ್ಧೀಕರಣ ಘಟಕ ನಿರ್ವಹಣೆಯಲ್ಲಿನ ಲೋಪವನ್ನು ಇನ್ನು ಮುಂದಾದರೂ ಸರಿಪಡಿಸುವಂತೆ ಒತ್ತಾಯಿಸಿದರು. ನಗರದಲ್ಲಿನ 35 ಕ್ಕೂ ಹೆಚ್ಚು ನೀರಿನ ಟ್ಯಾಂಕ್‍ಗಳನ್ನು 25 ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಸದಸ್ಯರು ಒತ್ತಾಯಿಸಿದರು. ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?
Advertisement
4.75 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ನೀರು ಶುದ್ಧೀಕರಣ ಘಟಕ ಆರಂಭಿಸಲಾಗಿದೆ. ನೀರು ಸರಬರಾಜು ಮಂಡಳಿ ಮೂರು ತಿಂಗಳು ನೀರು ಪೂರೈಕೆ ಕೂಡ ಮಾಡಿತ್ತು. ನಂತರ ಹಸ್ತಾಂತರಕ್ಕೆ ಮುಂದಾದರೆ ನಗರಸಭೆ ನಿರ್ಲಕ್ಷ್ಯ ಮಾಡಲಾಗಿತ್ತು. ಈಗ ಘಟಕ ಉಪಯೋಗವಿಲ್ಲದಂತಾಗಿ 58 ಲಕ್ಷ ರೂಪಾಯಿ ವೆಚ್ಚದಲ್ಲಿ ದುರಸ್ತಿ ಮಾಡಬೇಕಾಗಿದೆ ಅಂತ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲುಷಿತ ನೀರಿನಿಂದ ಮೂವರು ಸಾವನ್ನಪ್ಪಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ತನಿಖಾ ಸಮಿತಿಯನ್ನ ರಚಿಸಿದೆ. ಮೂರು ದಿನಗಳಲ್ಲಿ ವರದಿ ನೀಡುವಂತೆ ಸಮಿತಿಗೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ. ಅದೇನೇ ಇದ್ದರೂ ಒಟ್ಟಿನಲ್ಲಿ ನಗರಸಭೆಯ ದೀರ್ಘಕಾಲದ ನಿರ್ಲಕ್ಷ್ಯಕ್ಕೆ ಸಾಮಾನ್ಯ ಜನ ಬಲಿಯಾಗುತ್ತಿದ್ದಾರೆ.