ನವದೆಹಲಿ: ಈರುಳ್ಳಿ ದರ ಬಗ್ಗೆ ಕರ್ನಾಟಕ ಅಷ್ಟೇ ಅಲ್ಲದೆ, ದೇಶದಲ್ಲಿ ಭಾರೀ ಚರ್ಚೆಯಾಗುತ್ತಿದೆ. ದರ ಏರಿಕೆ ವಿಚಾರವಾಗಿ ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಆರೋಪ ಮಾಡುತ್ತಿವೆ. ಈ ಬೆನ್ನಲ್ಲೇ ಟಿ20 ಸರಣಿಯಲ್ಲಿ ಬ್ಯುಸಿ ಆಗಿರುವ ವೆಸ್ಟ್ ಇಂಡೀಸ್ ನಾಯಕ ಕಿರಾನ್ ಪೋಲಾರ್ಡ್ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈರುಳ್ಳಿ ದರದ ಬಗ್ಗೆ ಯೋಜಿಸಿದ್ದಾರಂತೆ.
ಹೈದರಾಬಾದ್‍ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲವು ಸಾಧಿಸಿದೆ. ಪಂದ್ಯಕ್ಕೂ ಮುನ್ನ ನಡೆದ ಟಾಸ್ ವೇಳೆ ಪೋಲಾರ್ಡ್ ಹಾಗೂ ಕೊಹ್ಲಿ ಏನನ್ನೋ ಯೋಚಿಸುತ್ತಿದ್ದಂತೆ ನಿಂತಿದ್ದರು. ನಿಂತಿದ್ದ ಫೋಟೋವನ್ನು ಐಸಿಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಇದಕ್ಕೆ ಶೀರ್ಷಿಕೆ (ಕ್ಯಾಪ್ಶನ್) ಕೊಡಿ ಎಂದು ಬರೆದುಕೊಂಡಿತ್ತು. ಇದನ್ನೂ ಓದಿ: ಮೊಬೈಲ್ ಕೊಂಡ್ರೆ 1 ಕೆ.ಜಿ ಈರುಳ್ಳಿ ಫ್ರೀ
Advertisement
Both captain's reaction, after knowing that the winning team also gets 25 kg onions.
— Sayantan Jana (@SJanaQA) December 7, 2019
Advertisement
ಐಸಿಸಿ ಟ್ವೀಟ್‍ಗೆ ಅನೇಕ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ವಿಜೇತ ತಂಡವು 25 ಕೆಜಿ ಈರುಳ್ಳಿಯನ್ನು ಪಡೆಯುತ್ತದೆ ಎಂದು ಉಭಯ ನಾಯಕರು ಯೋಚಿಸುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಮತ್ತೆ ಈರುಳ್ಳಿ ದುಬಾರಿ- ಕೆ.ಜಿಗೆ 200 ರೂ. ದಾಟಲಿದೆ ಬೆಲೆ
Advertisement
ಇನ್ನು ಕೆಲವರು ಹೇಗೆ ಇಷ್ಟು ರನ್ ಸಾಕೇ ಎಂದು ಪೊಲಾರ್ಡ್ ಕೇಳಿದರೆ ಇನ್ನು 6 ರನ್ ಬೇಕಿತ್ತು ಎಂದು ಕೊಹ್ಲಿ ಉತ್ತರ ನೀಡುವಂತೆ ಬರೆದುಕೊಂಡಿದ್ದಾರೆ. ಮತ್ತೆ ಕೆಲವರು, ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಂಭ್ರಮಿಸಿದ ವಿಡಿಯೋ ಹಾಗೂ ಫೋಟೋಗಳನ್ನು ರಿಟ್ವೀಟ್ ಮಾಡಿದ್ದಾರೆ.
Advertisement
Polly mind voice : thank god MSD IS NOT IN THE SQUAD Otherwise we damn dead surely..
Virat : can I call back my guru?
Polly : ????????
— Pravi Stalwart (@PraviStalwart) December 7, 2019