ನವದೆಹಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಚುನಾವಣಾ ಆಯೋಗ ಶುಕ್ರವಾರ ಎಚ್ಚರಿಕೆಯೊಂದನ್ನು ನೀಡಿದೆ.
ಹೌದು. ಭಾರತೀಯ ಸೇನೆಯನ್ನು ಮೋದಿಜೀ ಸೇನೆ ಎಂದು ಹೇಳಿಕೆ ನೀಡಿರುವ ಕುರಿತಂತೆ ಎಚ್ಚರಿಕೆಯಿಂದಿರಿ ಎಂದು ಆಯೋಗ ಯುಪಿ ಸಿಎಂಗೆ ತಾಕೀತು ಮಾಡಿದೆ.
Advertisement
ನೀವು ಒಬ್ಬ ಹಿರಿಯ ನಾಯಕರಾಗಿದ್ದು, ಸಾರ್ವಜನಿಕವಾಗಿ ನಿಮ್ಮಿಂದ ಜವಾಬ್ದಾರಿಯುತ ಹೇಳಿಕೆಗಳನ್ನು ನಿರೀಕ್ಷಿಸುತ್ತೇವೆ. ಹೀಗಾಗಿ ಚುನಾವಣಾ ಆಯೋಗದ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು, ಮುಂದೆ ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ ಚುನಾವಣೆಯ ಸಂದರ್ಭದಲ್ಲಿ ರಕ್ಷಣಾ ಪಡೆಗಳ ವಿಚಾರವಾಗಿ ಏನೂ ಪ್ರಸ್ತಾಪಿಸಬೇಡಿ ಎಂದು ಚುನಾವಣಾ ಆಯೋಗ ಯೋಗಿ ಆದಿತ್ಯನಾಥ್‍ಗೆ ಸಲಹೆ ನೀಡಿದೆ.
Advertisement
Advertisement
ಯೋಗಿ ಏನ್ ಹೇಳಿದ್ದರು?:
ಏಪ್ರಿಲ್ 1ರಂದು ಗಾಜಿಯಾಬಾದ್ ನಲ್ಲಿ ನಡೆದ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಯೋಗಿ, ಕಾಂಗ್ರೆಸ್ ನವರು ಉಗ್ರರಿಗೆ ಬಿರಿಯಾನಿ ನೀಡಿ ಸತ್ಕರಿಸಿದರೆ, ಮೋದಿ ಸೇನೆ ಉಗ್ರರಿಗೆ ಗುಂಡು ಹೊಡೆದು ತಿರುಗೇಟು ನೀಡಿದೆ ಎಂದಿದ್ದರು. ಈ ಹೇಳಿಕೆ ಸುದ್ದಿಯಾಗುತ್ತಿದ್ದಂತೆಯೇ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಟಿಎಂಸಿ ಖಂಡಿಸಿದ್ದವು.
Advertisement
#WATCH UP CM Yogi Adityanath in Ghaziabad: Congress ke log aatankvadiyon ko biryani khilate the aur Modi ji ki sena aatankvadiyon ko goli aur gola deti hai…Congress ke log Masood Azhar jaise aatankvadiyon ke sath 'ji' laga kar aatankvad ko protsahit karte hain, yahi antar hai pic.twitter.com/ScHCNYxgX7
— ANI UP/Uttarakhand (@ANINewsUP) March 31, 2019