ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ವಸತಿ ಯೋಜನೆ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಸುಳ್ಳು ಅಭಿಯಾನ ಆರಂಭ ಮಾಡಿದ್ದಾರೆ. ಸುಳ್ಳು ಪ್ರಚಾರದಿಂದ ಗೆದ್ದ ಮೇಲೆ ಅಭಿವೃದ್ಧಿ ಮೇಲೆ ಲಕ್ಷ್ಯ ಕೊಡ್ತಾರೆ ಎಂದು ಭಾವಿಸಿದ್ದೆ. ಆದರೆ ಶಾಸಕ ಪ್ರದೀಪ್ ಈಶ್ವರ್‌ಗೆ ಸುಳ್ಳೆ ಮನೆ ದೇವರಾಗಿದೆ ಎಂದು ಮಾಜಿ ಸಚಿವ ಸುಧಾಕರ್ (K Sudhakar) ಕಿಡಿಕಾರಿದ್ದಾರೆ.
ಕ್ಷೇತ್ರದಲ್ಲಿ ನಿವೇಶನಗಳು ಆಗೇ ಇಲ್ಲ ಎನ್ನುವ ಹಾಗೆ ಬಡವರ ಆಸೆಗೆ ತಣ್ಣೀರು ಎರಚುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ಸುಳ್ಳಿನ ಯೋಜನೆ ತಂದಿಲ್ಲ. ಕಣ್ಣಿಗೆ ಕಂಡಿರುವ ಯೋಜನೆ ತಂದಿದ್ದೇನೆ. ರಾಜ್ಯದಲ್ಲೇ 20,000ಕ್ಕೂ ಹೆಚ್ಚು ನಿವೇಶನ ತಂದ ಏಕೈಕ ವ್ಯಕ್ತಿ ನಾನು. ಇದನ್ನು ತಿಳಿದುಕೊಳ್ಳಲಿ ಎಂದರು.
Advertisement
Advertisement
ಎಲ್ಲದಕ್ಕೂ ಆದೇಶ ಪತ್ರಗಳಿವೆ. 555 ಎಕರೆ ಜಮೀನು ಮಂಜೂರಾತಿ ಆಗಿದೆ. ನಾನೇ ಖುದ್ದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಫಲಾನುಭವಿಗಳ ಆಯ್ಕೆ ಮಾಡಿದ್ದೇನೆ. ಆಗ ಆಧಿಕಾರಿಗಳು ಏನು ಮಾಡುತ್ತಿದ್ದರು? ಶಾಸಕ ಪ್ರದೀಪ್ ಈಶ್ವರ್ ಹಕ್ಕು ಪತ್ರ ಯಾವುದು, ಮಂಜೂರಾತಿ ಪತ್ರ ಯಾವುದು ಎಂಬುದು ಏನು ಅಂತನೇ ತಿಳಿದುಕೊಂಡಿಲ್ಲ. ಬೇಸಿಕ್ ಸೆನ್ಸ್ ಇಲ್ಲ, ಸಿನಿಮಾ ಡೈಲಾಗ್ ಹೊಡೆದುಕೊಂಡ್ರೆ ರಾಜಕಾರಣ ನಡೆಯಲ್ಲ ಎಂದು ಕಾಲೆಳೆದರು. ಇದನ್ನೂ ಓದಿ: ಹಸಿದವರಿಗೆ ಅನ್ನ ನೀಡದಿದ್ರೆ ಜನದ್ರೋಹಿ ಸರ್ಕಾರ ಎನಿಸಿಕೊಳ್ಳುತ್ತೆ – ರಾಜ್ಯಪಾಲ ಅಸಮಾಧಾನ
Advertisement
Advertisement
ಜನ ಒಂದು ಸಲ ಯಾಮಾರಬಹುದು, ಪದೇ ಪದೇ ಯಾಮಾರಲ್ಲ. ಈಗಲೇ ಜನರಿಗೆ ಬುದ್ಧಿ ಬರುತ್ತಿದೆ. ನಾನು 555 ಎಕರೆ ಮಂಜೂರು ಮಾಡಿಸಿರೋದು ಸತ್ಯ ಅಂತ ಶ್ರೀ ಭೋಗನಂದಿಶ್ವರ ದೇವಾಲಯಕ್ಕೆ ಹೋಗಿ ದೀಪ ಹಚ್ಚುತ್ತೇನೆ. ಅದು ಸುಳ್ಳು ಅಂತ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಂದು ದೀಪ ಹಚ್ಚಲಿ ಎಂದು ಸವಾಲು ಹಾಕಿದರು. ನಾನು ಜನರಿಗೆ ಸುಳ್ಳು ಹೇಳಿ ಮೋಸ ಮಾಡುವ ದುಸ್ಥಿತಿಗೆ ತಲುಪಿಲ್ಲ. ದೇವರು ಅನುಗ್ರಹ ಮಾಡಿದ್ದಾರೆ ಒಳ್ಳೆ ಕೆಲಸ ಮಾಡಿ ಎಂದು ತಿಳುವಳಿಕೆ ಕೊಡುತ್ತೇನೆ ಎಂದರು. ಇದನ್ನೂ ಓದಿ: ಸಿಎಂ ಕಚೇರಿಗೆ ಶಾಸಕರ ಲೆಟರ್ ತಗೊಂಡು ಹೋದ್ರೆ 30 ಲಕ್ಷ ಕೇಳ್ತಾರೆ: ಹೆಚ್‍ಡಿಕೆ ಹೊಸ ಆರೋಪ
Web Stories