ಬೆಂಗಳೂರು: ಕೇವಲ ರಾಜಕೀಯ ಲಾಭಕ್ಕೆ ಕಮ್ಯೂನಲ್ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡುವ ರಾಜನೀತಿ ದೇಶಕ್ಕೆ ಅಪಾಯಕಾರಿ. ಇದನ್ನು ಕಾಂಗ್ರೆಸ್ (Congress) ಮುಂದುವರಿಸಿದೆ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿರೋರು ದೇಶ ಪ್ರೇಮಿಗಳಾ? ರೈತರ ಅಥವಾ ಕನ್ನಡ ಪ್ರೇಮಿಗಳಾ? ಅವರು ಮತಾಂಧರು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ 430ನೇ ಜನ್ಮದಿನ ಸಂಭ್ರಮ – ನೂರಾರು ಕಲಾವಿದರಿಂದ ನಾದಹಾರ ಸೇವೆ
ತಮ್ಮ ಮತೀಯ ವಿಚಾರಕ್ಕಾಗಿ ಸಣ್ಣಸಣ್ಣ ವಿಷಯಕ್ಕೂ ಕೋಮುಗಲಭೆ ಎಬ್ಬಿಸುವ ಕ್ರಿಮಿನಲ್‌ಗಳು ಪೋಲೀಸ್ ಠಾಣೆ ಮೇಲೆ ಬೆಂಕಿ ಹಾಕಲು ಬರುತ್ತಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡುತ್ತಾರೆ. ಅವರ ಕೇಸ್ ವಾಪಸ್ ತೆಗೆದುಕೊಳ್ಳುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇವರಿಗೆ ಯಾವುದರಲ್ಲಿ ಹೊಡಿಬೇಕು. ಇವರ ರಾಜನೀತಿಗೆ ಯಾವುದರಲ್ಲಿ ಹೊಡಿಬೇಕು. ಶಬ್ದಗಳಿಂದ ಖಂಡಿಸಿದರೆ ಸಾಕಾಗೋದಿಲ್ಲ. ಜನ ಮುಖಕ್ಕೆ ಮಂಗಳಾರತಿ ಮಾಡಬೇಕು. ಕ್ಯಾಕರಿಸಿ ಉಗಿಬೇಕು, ಇವರ ಕೆಟ್ಟ ಮನಸ್ಥಿತಿಯ ರಾಜಕಾರಣಕ್ಕೆ ನಿದರ್ಶನ ಇದು ಎಂದು ಕೆಂಡಕಾರಿದರು. ಇದನ್ನೂ ಓದಿ: ಸನಾತನ ಧರ್ಮದ ಕುರಿತ ಹೇಳಿಕೆ – ಉದಯನಿಧಿ ಸ್ಟಾಲಿನ್ ವಿರುದ್ಧ ಕೋರ್ಟ್ ಅನುಮತಿಯಿಲ್ಲದೇ ದೂರು ದಾಖಲಿಸುವಂತಿಲ್ಲ: ಸುಪ್ರೀಂ