ಕೊಪ್ಪಳ: ರಾಜಕೀಯ ವ್ಯವಸ್ಥೆ ಗಲೀಜು ಆಗಿದೆ. ಮಾನ ಮರ್ಯಾದೆ ಇದ್ರೆ ರಾಜಕಾರಣ ಮಾಡಬಾರದು, ಲಫಂಗರು, ಮೂರು ಬಿಟ್ಟವರು ರಾಜಕಾರಣ ಮಾಡಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಬೇಸರದ ನುಡಿಗಳನ್ನು ಆಡಿದ್ದಾರೆ.
ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕೂಟದಲ್ಲಿ ದೇವಸ್ಥಾನ ಒಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಯರೆಡ್ಡಿ ಮಾಧ್ಯಮ ಮುಂದೆ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಲಫಂಗರು, ಮೂರು ಬಿಟ್ಟವರು ರಾಜಕಾರಣ ಮಾಡಬೇಕು. ಎಲ್ಲಾ ಪಕ್ಷದಲ್ಲಿ ನೈತಿಕತೆ ಇಲ್ಲ. ರಾಜಕೀಯ ಪಕ್ಷದಲ್ಲಿ ಅಷ್ಟೇ ಅಲ್ಲ, ಎಲ್ಲಾ ಕಡೆ ಅನೈತಿಕತೆ ನಡೆದಿದೆ. ಜನರೇ ರಾಜಕೀಯವನ್ನು ಸುಧಾರಣೆ ಮಾಡಬೇಕು ಎಂದು ಹೇಳಿದರು.
Advertisement
Advertisement
ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಸಿಎಂ ಬೆಗ್ಗರ್ಸ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಸಿದ ರಾಯರೆಡ್ಡಿ ಅವರು, ಯಾರು ಸಹ ಆ ರೀತಿ ಮಾತನಾಡಬಾರದು. ಸಿಎಂ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಹೀಗಾಗಿ ಅವರು ಆ ರೀತಿ ಮಾತನಾಡಬಾರದು ಎಂದರು.
Advertisement
ನಾನು ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ನಾನು ಟಿಕೆಟ್ ಗಾಗಿ ಅರ್ಜಿ ಹಾಕಿಲ್ಲ. ಕೆಲವರು ನಾನು ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಗಾಸಿಪ್‍ಗೆ ತೆರೆ ಎಳೆದಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv