ಕೆಜಿಎಫ್ -2 (KGF-2) ಸಕ್ಸಸ್ ಬಳಿಕ ಮುಂದಿನ ಸಿನಿಮಾದ (Cinema) ತಯಾರಿಯಲ್ಲಿ ರಾಕಿಂಗ್ ಸ್ಟಾರ್ (RockingStar) ಯಶ್ ಫುಲ್ ಬ್ಯುಸಿಯಾಗಿದ್ದಾರೆ. ಈ ನಡುವೆ ಯಶ್ ರಾಜಕೀಯಕ್ಕೆ ಬರುತ್ತಾರೆ ಅನ್ನೋ ಚರ್ಚೆ ಹುಟ್ಟಿಕೊಂಡಿವೆ.
ಈಗಾಗಲೇ ಅಂಬರೀಶ್, ಜಗ್ಗೇಶ್ (Jaggesh), ಶೃತಿ, ರಮ್ಯಾ (Ramya) ಹಾದಿಯಾಗಿ ಅನೇಕ ಸಿನಿ ದಿಗ್ಗಜರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗೆಯೇ ಕೆಜಿಎಫ್-2 ಸಕ್ಸಸ್ ಬಳಿಕ ಅಭಿಮಾನಿಗಳ ಅಲೆ ಎದ್ದಿರೋದ್ರಿಂದ ಯಶ್ (Yash) ಕೂಡ ರಾಜಕೀಯಕ್ಕೆ (Politics) ಬರುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಯಶ್ ಅವರೇ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಯಶ್ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಕೊನೆಗೂ KGF-3 ರಹಸ್ಯ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್
`ಮೊದಲಿಗೆ ನಾನು ನನ್ನಲ್ಲಿ ಮತ್ತು ನನ್ನ ಸಿನಿ ಉದ್ಯಮದಲ್ಲಿ ಬಹಳಷ್ಟು ಬದಲಾವಣೆ ತರಲು ಬಯಸುತ್ತೇನೆ. ನನ್ನ ಮಿತಿಯಲ್ಲಿ, ನಾನು ಸಮಾಜದ ಕೆಲ ವಿಷಯಗಳನ್ನು ಬದಲಾಯಿಸಲು ಪ್ರಯತ್ನಿಸುತ್ತೇನೆ. ಅವಶ್ಯಕತೆಯಿದ್ದ ಕೆಲಸಗಳನ್ನು ಈಗಾಗಲೇ ಮಾಡುತ್ತಿದ್ದೇವೆ. ಅದರಿಂದ ಕೆಲವರ ಜೀವನ ಬದಲಾಯಿಸಿದೆ. ಅದಕ್ಕೆ ರಾಜಕೀಯವೇ ಬೇಕು ಅನ್ನುವಂತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ- ಲಲಿತಾ ನಾಯಕ್‌ಗೆ ಖಾದರ್ ತಿರುಗೇಟು
ಬಹಳಷ್ಟು ಜನ ರಾಜಕೀಯ ಕೆಟ್ಟದ್ದು, ಬರೀ ಭ್ರಷ್ಟಾಚಾರ ಅಂತಾರೆ, ರಾಜಕಾರಣಿಗಳು ಜನರ ದುಡ್ಡಲ್ಲೇ ಬದುಕುತ್ತಿದ್ದಾರೆ ಅಂತಾರೆ. ಅದು ಎಷ್ಟರಮಟ್ಟಿಗೆ ಸತ್ಯ ಅನ್ನೋದು ನನಗೆ ಗೊತ್ತಿಲ್ಲ. ಆದರೆ ನಾನು ಎಂದಿಗೂ ನಟನಾಗಿ ಇರುತ್ತೇನೆ. ರಾಜಕೀಯ ಕೃತಜ್ಞತೆಯಿಲ್ಲದ ಕೆಲಸ. ಅಲ್ಲಿಗೆ ನಾನು ಬರೋದಿಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.