ಮೈಸೂರು: ದಾನಿಗಳು ನೀಡಿದ ಆಹಾರ ಕಿಟ್ ಮೇಲೆ ಜೆಡಿಎಸ್ ಶಾಸಕರ ಹೆಸರು ಬಳಕೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಬಡವರಿಗಾಗಿ ದಾನಿಗಳು ನೀಡಿದ ಆಹಾರ ಸಾಮಗ್ರಿಗೆ ತಮ್ಮ ಕೊಡುಗೆ ಎಂದು ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ.ಮಹದೇವ್ ನೀಡಿದ್ದಾರೆ ಅಂತ ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಬಾಬುರಾವ್ ಆರೋಪಿಸಿದ್ದಾರೆ.
ಲಾಕ್‍ಡೌನ್ ಅವಧಿಯಲ್ಲಿ ಬಡ ಕುಟುಂಬಗಳಿಗೆ ನೆರವು ನೀಡುವಂತೆ ತಾಲೂಕು ಆಡಳಿತ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿ ಹಲವರು ತಾಲೂಕು ಆಡಳಿತಕ್ಕೆ ಅಗತ್ಯ ವಸ್ತುಗಳ ಪೂರೈಕೆ ಮಾಡಿದ್ದರು. ತಾಲೂಕು ಆಡಳಿತಕ್ಕೆ ದಾನಿಗಳು ನೀಡಿದ ವಸ್ತುಗಳನ್ನು ಪಡೆದ ಶಾಸಕ ಮಹದೇವ್, ದಾನಿಗಳು ಕೊಟ್ಟ ಆಹಾರ ಪದಾರ್ಥಗಳನ್ನು ತಮ್ಮ ಬೆಂಬಲಿಗರ ಮೂಲಕ ತಮಗೆ ಬೇಕಾದವರಿಗೆ ಹಂಚಿಕೆ ಮಾಡುತ್ತಿದ್ದಾರೆಂದು ಪ್ರಕಾಶ್ ಬಾಬುರಾವ್ ಆರೋಪ ಮಾಡುತ್ತಿದ್ದಾರೆ.