ಬಾಲಿವುಡ್ (Bollywood) ನಟ ಸನ್ನಿ ಡಿಯೋಲ್ ಆಡಿದ ಮಾತು ವಿವಾದಕ್ಕೆ ಕಾರಣವಾಗಿದೆ. ಅವರ ಮಾತಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮಾಜಿ ಯೋಧರು ‘ಸನ್ನಿ ಡಿಯೋಲ್ ಎದೆಗೆ ಪಾಕಿಸ್ತಾನಿ ಗುಂಡು ತಗುಲಿದ್ದರೆ ಗೊತ್ತಾಗುತ್ತಿತ್ತು’ ಎಂದು ಹರಿಹಾಯ್ದಿದ್ದಾರೆ. ಸ್ವತಃ ರಾಜಕಾರಣಿಯೂ ಆಗಿರುವ ಸನ್ನಿ ಇಂತಹ ಮಾತುಗಳನ್ನು ಆಡಬಾರದು ಎಂದು ಕೆಲವರು ಸಲಹೆ ನೀಡಿದ್ದಾರೆ.
ಸನ್ನಿ ಡಿಯೋಲ್ (Sunny Deol) ಇದೀಗ ಹೊಸ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಗದರ್ 2 (Gadar 2) ಹೆಸರಿನ ಸಿನಿಮಾದಲ್ಲಿ ಕ್ರಶ್ ಇಂಡಿಯಾ ಚಳವಳಿಯ ನಡುವೆ ಪಾಕಿಸ್ತಾನಕ್ಕೆ (Pakistan) ಹೋಗಿ ತನ್ನ ಮಗನನ್ನು ವಾಪಸ್ಸು ಭಾರತಕ್ಕೆ (India) ಕರೆತರುವ ಕಥಾ ಹಂದರವಿದೆ. ಈ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದ ಅವರು, ‘ಇಂಡಿಯಾ ಮತ್ತು ಪಾಕಿಸ್ತಾನಿ ಜನರು ಪ್ರೀತಿ ಹಾಗೂ ಶಾಂತಿಯನ್ನು ಬಯಸುತ್ತಾರೆ. ಆದರೆ, ರಾಜಕಾರಣಿಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ. ಈ ದೇಶಗಳ ನಡುವಿನ ದ್ವೇಷಕ್ಕೆ ರಾಜಕಾರಣಿಗಳು ಕಾರಣ’ ಎಂದಿದ್ದಾರೆ. ಇದನ್ನೂ ಓದಿ:ತೆಲುಗಿನಲ್ಲಿ ಖುಷಿ ರವಿ ಮೇನಿಯಾ ಶುರು
ಸನ್ನಿ ಡಿಯೋಲ್ ಆಡಿದ ಈ ಮಾತು ಭಾರೀ ವಿವಾದವನ್ನೇ ಎಬ್ಬಿಸಿದೆ. ಪಾಕಿಸ್ತಾನಿ ಪರ ಯಾಕೆ ಇಷ್ಟೊಂದು ಪ್ರೇಮ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಸ್ವತಃ ಸನ್ನಿ ಡಿಯೋಲ್ ಗುರ್ದಾಸ್ ಪುರದ ಸಂಸದರೂ ಆಗಿರುವುದರಿಂದ ಇಂತಹ ಹೇಳಿಕೆಗೆ ಯಾವ ಅರ್ಥ ಬರುತ್ತದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಬ್ರಿಗೇಡಿಯರ್ ಹರ್ದೀಪ್ ಸಿಂಗ್ ಅವರು, ಸನ್ನಿ ಡಿಯೋಲ್ ಮಾತನ್ನು ಕಟುವಾಗಿ ಟೀಕಿಸಿದ್ದಾರೆ. ಪಾಕಿಸ್ತಾನಿಯರ ಒಂದು ಗುಂಡು ಸನ್ನಿ ಡಿಯೋಲ್ ಎದೆಗೆ ಬೀಳಲಿ ಆವಾಗ ಯಾವುದು ಪ್ರೀತಿ, ಯಾವುದು ದ್ವೇಷ ಎಂದು ಗೊತ್ತಾಗುತ್ತದೆ ಎಂದಿದ್ದಾರೆ.
Web Stories