ಬೆಂಗಳೂರು: ರಾಜಕಾರಣಿಗಳ ಹನಿಟ್ರ‍್ಯಾಪ್ ವಿಚಾರ ಮತ್ತೆ ಸದ್ದು ಮಾಡುತ್ತಿದ್ದು, ಪ್ರಭಾವಿಗಳ ಹನಿಟ್ರ‍್ಯಾಪ್ ಬಗ್ಗೆ ಸಚಿವ ಆರ್.ಬಿ.ತಿಮ್ಮಾಪುರ್ (RB Thimmapur) ಪ್ರತಿಕ್ರಿಯಿಸಿದ್ದಾರೆ.ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಕ್ಕೆ 5 ಲಕ್ಷ ಪರಿಹಾರ ಯೋಜನೆ ಘೋಷಣೆ ಮಾಡಿ: ಉಮಾಶ್ರೀ
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇವೆಲ್ಲವೂ ರಾಜಕಾರಣ ನಡೆಯುತ್ತಲೇ ಇರುತ್ತೆ. ಇದು ದುರ್ದೈವ, ಇದೊಂದು ಉದ್ಯೋಗ ಆಗಿದೆ. ಇದು ಸರಿಯಲ್ಲ ಎಂದರು.
ಇದೇ ವೇಳೆ ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ ಎಂಬ ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದನ್ನು ನಾನು ಹೇಗೆ ಹೇಳಲಿ? ಯಾರಿಗೂ ಕೂಡ ಆಗಬಾರದು ಅಂತಿಲ್ಲ, ಎಲ್ಲರಿಗೂ ಆಗಬೇಕೆಂಬ ಆಸೆಯಿದೆ. ನಾನು ಕೂಡ ಸಿಎಂ, ಅಧ್ಯಕ್ಷ ಆಗಬೇಕು ಅಂದುಕೊಂಡಿರುತ್ತೇನೆ. ಸಚಿವ ಸಂಪುಟ ವಿಸ್ತರಣೆ ವಿಚಾರ ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಹೇಳಿದರು.ಇದನ್ನೂ ಓದಿ: KPSC ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ – ಸದನದಲ್ಲಿ ಲೋಕಸೇವಾ ಆಯೋಗ ತಿದ್ದುಪಡಿ ವಿಧೇಯಕ ಪಾಸ್