ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ನಟ ಪ್ರಕಾಶ್ ರೈ ಸ್ಪರ್ಧಿಸಲು ಮುಂದಾಗಿದ್ದು, ಇಂದು ನಾಮಪತ್ರಿಕೆ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರಕಾಶ್ ರೈ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ನಾಮಪತ್ರ ಸಲ್ಲಿಸಿದಕ್ಕೆ ಸಂತೋಷವಾಗುತ್ತಿದೆ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಇದು ದೇಶದ ಹಬ್ಬ. ಪ್ರಜೆಗಳು ತಮ್ಮ ಮತ ಚಲಾಯಿಸುವ ದಿನ. 5 ವರ್ಷಗಳಲ್ಲಿ ಏನೂ ಮಾಡಿದ್ದಾರೆ ಎಂಬುದು ನೋಡಿ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಇದು ಒಂದು ಅದ್ಭುತ ದಿನ” ಎಂದರು.
Advertisement
ರಾಜಕೀಯಕ್ಕೆ ಬಂದು ಬದಲಾವಣೆ ಮಾಡಬೇಕು. ರಾಜಕಾರಣಿಗಳು ನಮ್ಮ ಹಣದಿಂದ ಆಡಳಿತ ನಡೆಸುತ್ತಾರೆ. ಅದು ನಮ್ಮ ಹಣ. ನಮ್ಮ ಹಣವನ್ನು ಇವರು ಹೇಗೆ ಉಪಯೋಗಿಸುತ್ತಿದ್ದಾರೆ. ಪ್ರಜೆಗಳು ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ನಾವು ತೆರಿಗೆ ಕಟ್ಟುತ್ತೇವೆ. ಯಾವ ನಾಯಕರು ಅವರ ಮನೆಯಿಂದ ದುಡ್ಡು ತರಲ್ಲ. ಏಕೆಂದರೆ ಬರುವ ನಾಯಕರಿಗೆ ಸಂಬಳ ಸಿಗುತ್ತೆ. ಅವರ ಕಾರು, ಸೆಕ್ಯೂರಿಟಿ ನಮ್ದು. ಅವರು ಅದನ್ನು ಉಪಯೋಗಿಸಿಕೊಳ್ಳಲಿ. ಆದರೆ ಜನರಿಗಾಗಿ ಆ ಹಣವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಉತ್ತರಿಸಿದ್ದಾರಾ? ರಾಜರ ತರಹ ಮೆರೆಯುತ್ತಿದ್ದಾರೆ. ಅವರು ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದರು.
Advertisement
Advertisement
ರಾಜಕೀಯಕ್ಕೆ ಇಳಿಯುವುದು ಅಲ್ಲ, ರಾಜಕೀಯಕ್ಕೆ ಪ್ರವೇಶ ಮಾಡುವುದು. ಇದು ಜೀವನದ ಇನ್ನೊಂದು ಮೆಟ್ಟಿಲು. ಇದು ನೈಸರ್ಗಿಕವಾಗಿ ನಡೆಯುತ್ತೆ. ಇನ್ಮುಂದೆ ಇದು ಜೀವನದ ವಿಧಾನ. ಅದು ಸೋಲು-ಗೆಲುವಿನ ಪ್ರಶ್ನೆ ಅಲ್ಲ. ನಮ್ಮನ್ನು ವೋಟ್ ಮಾಡಿ ಗೆಲ್ಲಿಸಿದ ಜನರ ಪರ ಕೆಲಸ ಮಾಡಬೇಕು. ಅವರ ಧ್ವನಿ ಹಾಗೂ ಪ್ರತಿನಿಧಿ ಆಗಬೇಕು. ನಾನು ಕೇವಲ ನಟ ಅಲ್ಲ. ನಾನು ಸಾಮಾಜಿಕ ಚಿಂತಕ ಕೂಡ. ಜನರು ನನ್ನನ್ನು ಕೇವಲ ನಟನಾಗಿ ನೋಡುತ್ತಿಲ್ಲ. ನಾನು ಜನರ ಸಮಸ್ಯೆ ತಿಳಿದುಕೊಂಡಿರುವವನು. ಯಾರನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತಿಲ್ಲ. ಜನರ ಪರವಾಗಿ ಮಾತನಾಡುತ್ತಿದ್ದೇನೆ. ಆ ನಿಟ್ಟಿನಲ್ಲಿ ಜನರು ನನ್ನ ವ್ಯಕ್ತಿತ್ವವನ್ನು ನೋಡಬಹುದು ಎಂದು ತಿಳಿಸಿದರು.
Advertisement
ರಾಜಕೀಯದಲ್ಲಿ ಸಿನಿಮಾದವರು ಮಾತ್ರವಲ್ಲದೇ ಉದ್ಯಮಿಯವರು, ಲಾಯರ್‍ಗಳು ಸೋತಿದ್ದಾರೆ. ಸಿನಿಮಾ ಎಂದು ನೋಡಬೇಡಿ. ಒಂದು ಪ್ರಜೆಯಾಗಿ ನೋಡಿ. ಒಬ್ಬ ಬೆಳೆದು ನಿಂತ ವ್ಯಕ್ತಿ ಹಾಗೂ ಸಾಧಾನೆ ಮಾಡಿದ ವ್ಯಕ್ತಿಯನ್ನು ನೋಡಿ. ಅವರ ಸಾಧಿಸುವ ಸಾಧನೆಯನ್ನು ನೋಡಿ. ಯಾವುದೇ ಚಿಕ್ಕ ಕೆಲಸ ಮಾಡಿದಕ್ಕೆ ನನಗೆ ಈ ಸ್ಥಾನ ಮಾನ ಸಿಕ್ಕಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬಲ ಬೇಡ. ಜನರ ಬಲ ಹಾಗೂ ಬೆಂಬಲ ಬೇಕು. ಬೆಂಗಳೂರು ಕೇಂದ್ರ ನಾನು ಹುಟ್ಟಿದ ಊರು. ನನ್ನ ಬಾಲ್ಯ, ಶಿಕ್ಷಣ, ರಂಗಭೂಮಿ, ಸಿನಿಮಾ ಎಲ್ಲಾ ಶಾಂತಿನಗರದಲ್ಲಿ ನಡೆದಿದೆ. ಹಾಗಾಗಿ ರಾಜಕೀಯಕ್ಕೂ ಶಾಂತಿನಗರವನ್ನು ಆಯ್ಕೆ ಮಾಡಿದ್ದೇನೆ ಎಂದು ಹೇಳಿದರು.
ಜಾತಿ ರಾಜಕಾರಣದ ಬಗ್ಗೆ ಮಾತನಾಡಿ ಜನರನ್ನು ಜನರಾಗಿ ನೋಡಿ. ಈ ದೇಶದ ಪ್ರಜೆಯಾಗಿ ನೋಡಿ. ಒಬ್ಬರು ಕೇವಲ ಹಿಂದೂಗಳಿಗೆ ವೋಟ್ ಹಾಕುತ್ತಾರೆ. ಮುಸ್ಲಿಂಗೆ ವೋಟ್ ಹಾಕುತ್ತಾರೆ ಎಂದು ಹೇಳುವುದು ಸರಿಯಲ್ಲ. ಕೆಲವರು ಇದನ್ನು ಲೆಕ್ಕಾಚಾರ ಹಾಕುತ್ತಾರೆ. ಇದರಿಂದ ಜನರಿಗೆ ಸಮಸ್ಯೆಯಿಲ್ಲ. ಭಾಷೆ ಬದಲಾಗಬೇಕು. ಅವರ ಭದ್ರಕೋಟೆ, ಇವರ ಭದ್ರಕೋಟೆ ಎಂದು ನೋಡಬಾರದು. ಪ್ರಜೆಗಳನ್ನು ಆಳಬೇಕೆಂದು ಪ್ರಜಾಪ್ರಭುತ್ವ ಬಂದ ಮೇಲೆ ರಾಜನಾಗಿ ಗೆದ್ದೆ ಎಂದು ಹೇಳುತ್ತಾರೆ. ಆದರೆ ಅವರು ಗೆದ್ದಿಲ್ಲ ಹೊರತು ಜನರಿಂದ ಆಯ್ಕೆ ಆಗಿದ್ದಾರೆ. ನಮ್ಮ ಆಳ್ವಿಕೆಯಲ್ಲಿ ಎಂದು ಹೇಳುತ್ತಾರೆ. ಆಳಲು ಅವರು ಯಾರು? ಆಡಳಿತ ಎಂದು ಹೇಳಬೇಕು. ಆ ಭಾಷೆಯನ್ನು ಮೊದಲು ಬದಲಾಯಿಸಿ. ಆಳ್ವಿಕೆ ಬೇಡ ಎಂದೇ ಪ್ರಜಾಪ್ರಭುತ್ವ ತಂದಿರುವುದು. ಜನರನ್ನು ಮನುಷ್ಯನಾಗಿ ನೋಡಿ. ಜಾತಿಯಾಗಿ ನೋಡಬೇಡಿ ಎಂದು ಪ್ರಕಾಶ್ ರೈ ಹೇಳಿದರು.