ತಮ್ಮ ಬಗ್ಗೆ ಹಗುರವಾಗಿ ಮಾತನಾಡಿರುವ ಮತ್ತು ನಟಿಯರನ್ನು ಅನುಮಾನದ ರೀತಿಯಲ್ಲಿ ನೋಡುವಂತೆ ಮಾಡಿರುವ ತಮಿಳಿನ ಖ್ಯಾತ ರಾಜಕಾರಣಿ ಎ.ವಿ.ರಾಜು ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ತ್ರಿಶಾ. ಇಂಥ ಕೊಳಕು ಮನಸ್ಥಿತಿಯವರಿಗೆ ಬುದ್ಧಿ ಕಲಿಸಲು ಕಾನೂನು ಹೋರಾಟವೇ ಸರಿಯಾದ ಮಾರ್ಗ ಎಂದಿದ್ದಾರೆ ನಟಿ.
Advertisement
ಹಿರಿಯ ರಾಜಕಾರಣಿಗಾಗಿ ನಟಿ ತ್ರಿಶಾರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್ ಗೆ ಕರೆಯಿಸಿಕೊಂಡಿದ್ದೆವು ಎಂದು ಎಐಎಡಿಎಂಕೆ ಉಚ್ಚಾಟಿತ ಮುಖಂಡ ಎ.ವಿ.ರಾಜು ಅಸಂಬದ್ಧ ಹೇಳಿಕೆ ನೀಡಿದ್ದರು. ಈ ಮಾತು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ತಮಿಳು ಸಿನಿಮಾ ರಂಗದ ಅನೇಕರು ರಾಜು ವಿರುದ್ಧ ಹರಿಹಾಯ್ದಿದ್ದರು. ತ್ರಿಶಾ ಕೂಡ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುವ ಕುರಿತು ಪ್ರತಿಕ್ರಿಯೆ ನೀಡಿದ್ದರು.
Advertisement
Advertisement
ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ರಾಜು ಕ್ಷಮೆ ಕೇಳಿದ್ದಾರೆ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ನಾನು ತ್ರಿಶಾ ರೀತಿಯ ನಟಿಯನ್ನು ಎಂದು ಹೇಳಿದ್ದು, ತ್ರಿಶಾ ಅವರನ್ನೇ ಅಂತ ಹೇಳಿಲ್ಲ. ಆದರೂ, ನಾನು ಕ್ಷಮೆ (Kshame) ಕೇಳುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ತಮಗೆ ಇರಲಿಲ್ಲವೆಂದು ಹೇಳಿದ್ದಾರೆ.
Advertisement
ಪದೇ ಪದೇ ನಟಿ ತ್ರಿಶಾ (Trisha) ಅವರ ಮೇಲೆ ಮಾನಹಾನಿ ಮಾಡುವಂತಹ ಘಟನೆಗಳು ತಮಿಳು ನಾಡಿನಲ್ಲಿ ನಡೆಯುತ್ತಿವೆ. ಈ ಹಿಂದೆ ಮನ್ಸೂರ್ ಅಲಿ ಖಾನ್ ಕೂಡ ತ್ರಿಶಾರ ಬಗ್ಗೆ ಅವಹೇಳನ ಮಾಡುವಂತ ಮಾತುಗಳನ್ನು ಆಡಿದ್ದರು. ಇದೀಗ ತಮಿಳು ನಾಡಿನ ರಾಜಕೀಯ ಮುಖಂಡ ಎ.ವಿ.ರಾಜು (A.V. Raju)ನಾಲಿಗೆ ಹರಿಬಿಟ್ಟಿದ್ದರು. ಲೈಂಗಿಕ ಕೆಲಸಕ್ಕಾಗಿ ಎ.ವೆಂಕಟಾಚಲಂ (A. Venkatachalam) ಅವರು ತ್ರಿಶಾರಿಗೆ 25 ಲಕ್ಷ ರೂಪಾಯಿ ಆಫರ್ ನೀಡಿದ್ದರು. ಶಾಸಕರೊಬ್ಬರು ಅದಕ್ಕೆ ಒಪ್ಪಿಸಿದ್ದರು ಎಂದು ರಾಜು ಹೇಳಿದ್ದರು. ಇಂತಹ ಅನೇಕ ನಟಿಯರು ನಮ್ಮಲ್ಲಿ ಇದ್ದಾರೆ ಎಂದು ರಾಜು ಹೇಳಿಕೆ ನೀಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ಭಾರೀ ಸದ್ದು ಮಾಡುತ್ತಿದ್ದಂತೆಯೇ ಇದ್ದಕ್ಕೆ ನಟಿ ತ್ರಿಶಾ ಕೂಡ ಪ್ರತಿಕ್ರಿಯೆ ನೀಡಿದ್ದರು. ಪ್ರಚಾರಕ್ಕಾಗಿ ಹೀಗೆ ನಾಲಿಗೆ ಹರಿಬಿಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ಲೀಗಲ್ ಟೀಮ್ ತಕ್ಕ ಪಾಠ ಕಲಿಸೋಕೆ ಸಜ್ಜಾಗಿದೆ ಎಂದು ತ್ರಿಷಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಪ್ರಚಾರಕ್ಕಾಗಿ ಇಂತ ಕೀಳು ಮಟ್ಟದ ವ್ಯಕ್ತಿಗಳನ್ನು ಎದುರುಗೊಳ್ಳೋಕೆ ಅಸಹ್ಯವಾಗುತ್ತಿದೆ. ಇದನ್ನು ಎಂದಿಗೂ ಸಹಿಸಲ್ಲ ಮತ್ತು ಸುಮ್ಮನೆ ಕೂರುವುದಿಲ್ಲ. ನನ್ನ ಲೀಗಲ್ ಟೀಮ್ ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದರು.