ನವದೆಹಲಿ: ಇವತ್ತು ಸುಪ್ರಿಂ ಕೋರ್ಟ್ ನಲ್ಲಿ ವಿಶೇಷವಾದ ಅರ್ಜಿ ಸಲ್ಲಿಕೆಯಾಗಿದೆ. ಒಪ್ಪಿಗೆ ಇಲ್ಲದೇ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಿದ್ದನ್ನು ಪ್ರಶ್ನಿಸಿ ರಾಜ್ಯದ ರಾಜಕಾರಣಿಯೊಬ್ಬರ ಮಗಳು ಸುಪ್ರಿಂ ಮೆಟ್ಟಿಲೇರಿದ್ದಾರೆ.
ರಾಜಕಾರಣಿಯ ಹೆಸರು ಮತ್ತು ಮಗಳ ಹೆಸರನ್ನು ಅರ್ಜಿದಾರರು ಗೌಪ್ಯವಾಗಿಟ್ಟಿದ್ದಾರೆ. ಆದರೆ ಈ ಅರ್ಜಿ ಸಲ್ಲಿಕೆಯಾಗಿರುವುದು ಕಲಬುರಗಿಯಿಂದ ಎಂಬುದು ತಿಳಿದು ಬಂದಿದೆ. ಒತ್ತಾಯ ಪೂರ್ವಕ ಮದುವೆಗಳಿಗೆ ಕಾನೂತ್ಮಕ ರಕ್ಷಣೆ ಬೇಕು ಅಂತಾ ರಾಜಕಾರಣಿ ಮಗಳು ಸುಪ್ರಿಂಕೋರ್ಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆಗೆ ಪುರಸ್ಕೃತವಾಗಿದೆ.
Advertisement
ಇಂದು ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಮೇ ಐದಕ್ಕೆ ವಿಚಾರಣೆ ನಿಗದಿಪಡಿಸಿದೆ. ಸಂತ್ರಸ್ಥ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ವಾದ ಆಲಿಸಿದ ಪೀಠ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯುವತಿಗೆ ರಕ್ಷಣೆ ನೀಡುವಂತೆ ಸೂಚಿಸಿದೆ. ಅಷ್ಟೇ ಅಲ್ಲದೇ ಈಗ ನಡೆದಿರುವ ಮದುವೆ ರದ್ದಾಗಬೇಕು ಎಂದರೆ ಕಲುಬುರಗಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿದೆ.