ಬೆಂಗಳೂರು: ವಿಸ್ಮಯ ಶೂಟಿಂಗ್ ವೇಳೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಅವರು ಇಂದು ವಿಚಾರಣೆಗೆ ಹಾಜರಾಗಿದ್ದು, ಇದೀಗ ಈ ಪ್ರಕರಣಕ್ಕೆ ಪೊಲಿಟಿಕಲ್ ಟ್ವಿಸ್ಟ್ ದೊರೆತಿದೆ.
ಹೌದು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸರ್ಜಾ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೇ ಬಿಜೆಪಿ ಎಂಎಲ್ ಸಿ ತೇಜಸ್ವಿನಿ ರಮೇಶ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
Advertisement
ಎಡಪಂಥಿಯರು ಅರ್ಜುನ್ ಸರ್ಜಾ ಮೂಲಕ ಮೋದಿಯನ್ನು ಟಾರ್ಗೆಟ್ ಮಾಡಿದ್ದಾರೆ. ಅರ್ಜುನಾ ಸರ್ಜಾ ತಂದೆ ಮೂಲತಃ ಆರ್‍ಎಸ್‍ಎಸ್ ನವರಾಗಿದ್ದಾರೆ. ಅರ್ಜುನ್ ಸರ್ಜಾ ಕೂಡ ಆಂಜನೇಯನ ಪರಮ ಭಕ್ತರಾಗಿದ್ದಾರೆ. ಚೆನ್ನೈನಲ್ಲಿ ಆಂಜನೇಯನ ಬೃಹತ್ ಪ್ರತಿಮೆ ಪ್ರತಿಷ್ಠಾಪಿಸುತ್ತಿದ್ದಾರೆ. ತಮಿಳುನಾಡಿನ ಹಲವೆಡೆ ಗೋಶಾಲೆ ದತ್ತು ಪಡೆದಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಮಕ್ಕಳು ಗೋವನ್ನು ಗಿಫ್ಟಾಗಿ ಕೊಟ್ಟಿದ್ದರು. ಪೊಲೀಸರೇ ನೀವು ಗಮನಿಸಬಹುದು, ಶೃತಿ ಬೆಂಬಲಕ್ಕೆ ನಿಂತಿರುವವರೆಲ್ಲ ಎಡಪಂಥಿಯರು ಆಗಿದ್ದಾರೆ. ಪ್ರಕಾಶ್ ರೈ, ಚೇತನ್, ಕವಿತಾ ಲಂಕೇಶ್ ಎಲ್ಲರೂ ಮೋದಿ ವಿರೋಧಿಗಳೇ ಆಗಿದ್ದಾರೆ. ಇವರೆಲ್ಲಾ ಸೇರಿಕೊಂಡು ಅರ್ಜುನ್ ಸರ್ಜಾ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಅಂತ ತೇಜಸ್ವಿನಿ ಪೊಲೀಸರಿಗೆ ತಿಳಿಸಿದ್ದಾರೆ ಅಂತ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
Advertisement
Advertisement
ಠಾಣೆಯಲ್ಲಿ ಪೊಲೀಸರು ಅರ್ಜುನ್ ಸರ್ಜಾ ಅವರಿಗೆ ಸುಮಾರು 50 ಪ್ರಶ್ನೆಗಳನ್ನು ಸಿದ್ಧಮಾಡಿಕೊಂಡಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಅಯ್ಯಣ್ಣ ರೆಡ್ಡಿಯಿಂದ ಅವರು ಅರ್ಜುನ್ ಸರ್ಜಾ ಅವರನ್ನು ವಿಚಾರಣೆ ಮಾಡಿದ್ದಾರೆ. ನಟಿ ಶೃತಿ ಹರಿಹರನ್, ಮೇಕಪ್ ಮನ್ ಕಿರಣ್ ಮತು ಸಹ ನಿರ್ಮಾಪಕಿ ಮೋನಿಕಾ ಹೇಳಿಕೆ ಆಧರಿಸಿ ಪ್ರಶ್ನೆಯನ್ನು ಕೇಳಿದ್ದಾರೆ.
ನಿಮ್ಮ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿದೆ ಏನು ಹೇಳುತ್ತೀರಾ ಎಂದು ಪೊಲೀಸರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅರ್ಜನ್ ಸರ್ಜಾ ಅವರು, ಈಗಾಗಲೇ ನಾನು ಸ್ಪಷ್ಟಪಡಿಸಿದ್ದೇನೆ. ಇದು ಉದ್ದೇಶ ಪೂರ್ವಕವಾದ ಕೇಸ್. ನಾನು ಶೃತಿ ಹರಿಹರನ್ ಅವರ ಜೊತೆ ಅಸಭ್ಯವಾಗಿ ನಡೆದುಕೊಂಡಿಲ್ಲ. ನನ್ನ ಮೇಲೆ ಸುಮ್ಮನೆ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=7ypwUeFRkig