ಬೆಂಗಳೂರು: ರಾಜ್ಯ ರಾಜಕಾರಣದ ಟ್ರಬಲ್ ಶೂಟ್ ಮಾಡಿದ ನಾಯಕನ ಕನಸ್ಸಿಗೆ ತೊಂದರೆ ಎದುರಾಗುತ್ತಾ ಅನ್ನೋ ಪ್ರಶ್ನೆಯೊಂದು ಎದುರಾಗಿದೆ. ರಾಜಕಾರಣದಲ್ಲಿ ಯಾರ ವಿರುದ್ಧ ಬೇಕಾದರೂ ತೊಡೆ ತಟ್ಟುತ್ತೇನೆ ಎನ್ನುತ್ತಿದ್ದ ನಾಯಕನಿಗೆ ಸ್ವಪಕ್ಷಿಯರೇ ಕಾಲು ಎಳೆಯೋಕೆ ಮುಂದಾಗಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹೌದು. ವಿಪಕ್ಷ ನಾಯಕನ ಸ್ಥಾನದ ಕನವರಿಕೆಯಲ್ಲಿರುವ ಸಿದ್ದರಾಮಯ್ಯ ಅವರು ಪಕ್ಷ ತಮ್ಮ ಹಿಡಿತದಲ್ಲಿರಬೇಕು ಎಂಬ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹೀಗಾಗಿ ಎಐಸಿಸಿ ರೀ ಶಫಲ್ ಆದ ನಂತರ ಕೆಪಿಸಿಸಿ ರೀಶಫಲ್ ಮಾಡುವುದಾದರೆ ಕೃಷ್ಣ ಬೈರೇಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಲು ಸಿದ್ದರಾಮಯ್ಯ ದಾಳ ಉರುಳಿಸತೊಡಗಿದ್ದಾರೆ.
Advertisement
Advertisement
ಸಿದ್ದರಾಮಯ್ಯರ ಈ ದಾಳ ನೇರವಾಗಿ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್‍ಗೆ ಕೊಟ್ಟ ಟಕ್ಕರ್ ಆಗಿದೆ. ಇತ್ತ ವಿಪಕ್ಷ ನಾಯಕನ ಸ್ಥಾನದ ಬಗ್ಗೆ ಆಸಕ್ತಿ ತೋರದ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕನವರಿಕೆಯಲ್ಲಿದ್ದಾರೆ. ಆದರೆ ಡಿಕೆಶಿ ಕೆಪಿಸಿಸಿ ಪಟ್ಟಕ್ಕೆ ಬಂದರೆ ಪಕ್ಷದ ಹಿಡಿತ ಬೇರೆ ಯಾರ ಕೈಗೂ ಸಿಗಲ್ಲ ಅನ್ನೋ ಕಾರಣಕ್ಕೆ ಅದೇ ಸಮುದಾಯದ ಕೃಷ್ಣಬೈರೆಗೌಡರ ಹೆಸರನ್ನ ಮುನ್ನಲೆಗೆ ತಂದಿದ್ದಾರೆ ಎನ್ನಲಾಗಿದೆ.
Advertisement
ಸಿದ್ದರಾಮಯ್ಯರ ಈ ದಾಳಕ್ಕೆ ಡಿಕೆಶಿ ವಿರೋಧಿ ಬಣದ ಎಲ್ಲಾ ನಾಯಕರು ತೆರೆ ಮರೆಯಲ್ಲೇ ಕೈ ಜೋಡಿಸಿ ಜೈ ಎಂದಿದ್ದಾರೆ. ಒಟ್ಟಾರೆ ಟ್ರಬಲ್ ಶೂಟರ್ ಗೆ ಕೆಪಿಸಿಸಿ ಪಟ್ಟ ತಪ್ಪಿಸಲು ಇನ್ನಿಲ್ಲದ ಪ್ರಯತ್ನ ಆರಂಭವಾಗಿದ್ದು, ಆದರೆ ಈ ಎಲ್ಲಾ ಸಮಸ್ಯೆಗಳನ್ನು ಮೀರಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಪಟ್ಟಕ್ಕೆ ಬರ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.