ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿರುದ್ಧ ಇದುವರೆಗೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲು ಆಗಿಲ್ಲ. ಹೈಕಮಾಂಡ್‍ನಿಂದ ಕೇವಲ ಎಚ್ಚರಿಕೆ ಮಾತ್ರ, ಇಲ್ಲ ಶಿಸ್ತು ಕ್ರಮ. ರಾಜ್ಯ ಬಿಜೆಪಿ (BJP) ಯಿಂದಲೂ ಯಾವುದೇ ಕ್ರಮ ಇಲ್ಲವಾಗಿದೆ. ಯತ್ನಾಳ್ ವಿಚಾರದಲ್ಲಿ ಖುದ್ದು ಸಿಎಂ ಬೊಮ್ಮಾಯಿ (Basavaraj Bommai) ಯೂ ಅಸಹಾಯಕರೇ ಆಗಿರೋದು ಸ್ಪಷ್ಟವಾಗಿ ಗೋಚರವಾಗ್ತಿದೆ.
Advertisement
ಇಷ್ಟೆಲ್ಲ ಸನ್ನಿವೇಶಗಳು ಯತ್ನಾಳ್ ಗೆ ಪರವಾಗಿರೋದು ಸ್ವಪಕ್ಷೀಯ ವಿರೋಧಿಗಳನ್ನು ಕೆಣಕಿದೆ. ಹೀಗಾಗಿ ರಾಜ್ಯ ಬಿಜೆಪಿ ಸ್ವಪಕ್ಷೀಯ ವಿರೋಧಿಗಳೆಲ್ಲ ಇದೀಗ ಯತ್ನಾಳ್ ವಿರುದ್ಧ ಒಂದಾಗಿ ಯತ್ನಾಳ್ ಗೆ ಖೆಡ್ಡಾ ತೋಡಲು ಸ್ಕೆಚ್ ರೂಪಿಸ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಯತ್ನಾಳ್ ಆಟಾಟೋಪಕ್ಕೆ ಬಿಜೆಪಿ ವರಿಷ್ಠರು ಸುಸ್ತು- ಲಗಾಮು ಹಾಕದಷ್ಟು ವೀಕ್ ಆಯ್ತಾ ಹೈಕಮಾಂಡ್?
Advertisement
Advertisement
ಯತ್ನಾಳ್ ವಿರುದ್ಧ ನಿರಾಣಿ (Murugesh Nirani) ಮತ್ತು ಬ್ರದರ್ಸ್ ಒಂದಾಗಿ ಗುಡುಗಿರೋದು ಈ ನಿಟ್ಟಿನಲ್ಲಿ ಹಲವು ಸುಳಿವುಗಳನ್ನು ಬಿಟ್ಟು ಕೊಡ್ತಿದೆ. ಮೊನ್ನೆ ಬೆಂಗಳೂರಿನಲ್ಲಿ ಮಾತಾಡಿದ ಸಚಿವ ಮುರುಗೇಶ್ ನಿರಾಣಿ, ಯತ್ನಾಳ್ ವಿಚಾರದಲ್ಲಿ ಇನ್ನು ತಮ್ಮ ಸಹನೆ ಮುಗೀತು. ಯತ್ನಾಳ್ ನಾಲಿಗೆಗೆ ಕಡಿವಾಣ ಹಾಕ್ತೀವಿ ಅಂತ ನೇರವಾಗಿ ವಾರ್ನಿಂಗ್ ನೀಡಿದ್ದಾರೆ.
Advertisement
ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ. ಬಾಯಿ ಹರುಕನಂತೆ ಮಾತನಾಡುವ ನಾಮರ್ಧ ನಿನ್ನದೇ ಭಾಷೆಯಲ್ಲಿಯೇ ಉತ್ತರನೀಡುತ್ತೇನೆ. ಒಬ್ಬ ಅಪ್ಪನಿಗೆ ಹುಟ್ಟದ ನಿನಗೆ ಅಂತ್ಯ ಹಾಡುವ ಕಾಲ ಬಂದಿದೆ.ನೇರ ಕಾದಾಟಕ್ಕೆ ಕಣಕ್ಕೆ ಬಂದರೆ ನಿನ್ನ ತಾಕತ್ತು ತಿಳಿಯುತ್ತದೆ. ರಾಜಕೀಯ ಮರುಜನ್ಮ ಕೊಟ್ಟವರಿಗೆರಾಜಕೀಯ ಮರಣ ಶಾಸನ ಬರೆಯುವುದು ಗೊತ್ತಿದೆ.
— Sangamesh Nirani (@SangameshNirani) January 15, 2023
ಶಾಸಕ ಯತ್ನಾಳ್‍ಗೆ ಸಚಿವ ಮುರುಗೇಶ್ ನಿರಾಣಿಯವರ ಸಹೋದರ ಸಂಗಮೇಶ್ ನಿರಾಣಿ (Sangamesh Nirani) ಯವರು ಸಹ ಭಾನುವಾರ ಟ್ವಿಟ್ಟರ್ ಮೂಲಕ ತೀಕ್ಷ್ಣವಾಗಿ ಯತ್ನಾಳ್ ಗೆ ಎಚ್ಚರಿಕೆ ಕೊಟ್ಟಿದ್ದಾರೆ. “ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ. ಬಾಯಿ ಹರುಕನಂತೆ ಮಾತನಾಡುವ ನಾಮರ್ಧ, ನಿನ್ನದೇ ಭಾಷೆಯಲ್ಲಿಯೇ ಉತ್ತರ ನೀಡುತ್ತೇನೆ. ಒಬ್ಬ ಅಪ್ಪನಿಗೆ ಹುಟ್ಟಿದ ನಿನಗೆ ಅಂತ್ಯ ಹಾಡುವ ಕಾಲ ಬಂದಿದೆ. ನೇರ ಕಾದಾಟಕ್ಕೆ ಬಂದರೆ ನಿನ್ನ ತಾಕತ್ತು ತಿಳಿಯುತ್ತದೆ. ನಿನ್ನ ರಾಜಕೀಯ ಮರಣ ಶಾಸನ ಬರೆಯುವುದು ಗೊತ್ತಿದೆ. ಮುರುಗೇಶ್ ನಿರಾಣಿ ತೇಜೋವಧೆಗೆ ನಿಂತ ಮುಠ್ಠಾಳರಿಗೆ ಕಾಲವೇ ಉತ್ತರ ನೀಡುತ್ತದೆ..” ಹೀಗೆಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿ ಸಂಗಮೇಶ್ ನಿರಾಣಿ ಗುಡುಗಿದ್ದಾರೆ.
ಹರಿಹರದಲ್ಲಿ ಮಾತಾಡಿದ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (B Y Vijayendra) , ಯತ್ನಾಳ್ ವಿಚಾರ ಹೈಕಮಾಂಡ್ ನೋಡಿಕೊಳ್ಳುತ್ತೆ ಎಂದು ಸುಳಿವು ಕೊಟ್ಟಿದ್ದಾರೆ. ಯತ್ನಾಳ್ ಗೆ ಎದುರಾಳಿಗಳಿಂದ ಸದ್ಯದಲ್ಲೇ ಕಂಟಕ ಎದುರಾಗುವ ಲಕ್ಷಣಗಳು ಗೋಚರವಾಗುತ್ತಿವೆ. ರಾಜಕೀಯವಾಗಿ ವಿಜಯಪುರದಲ್ಲಿ ಯತ್ನಾಳ್ ಪ್ರಭಾವ ಕುಗ್ಗಿಸಿ ಮಣಿಸಲು ಭಾರೀ ಸ್ಕೆಚ್ ರೆಡಿಯಾಗ್ತಿದೆ ಎನ್ನಲಾಗಿದೆ.
ಯತ್ನಾಳ್ ರಾಜಕೀಯ ವಿರೋಧಿಗಳ ಜೊತೆ ಸ್ವಪಕ್ಷೀಯ ವಿರೋಧಿಗಳು ಕೈ ಮಿಲಾಯಿಸುವ ಪ್ರಯತ್ನಗಳೂ ತೆರೆಮರೆಯಲ್ಲಿ ನಡೀತಿವೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಜೆಪಿಯ ಅಂತರ್ಯುದ್ಧ ಭಾರೀ ಕುತೂಹಲ ಮೂಡಿಸಿರೋದಂತೂ ಸತ್ಯ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k