ರಾಯಚೂರು: ರಾಜಕೀಯ ಜೀವನ ಪುನಃ ಪ್ರಾರಂಭ ಮಾಡುತ್ತಿದ್ದೇನೆ. ಸಾರ್ವಜನಿಕ ಬದುಕಿಗೆ ಬರುತ್ತಿದ್ದೇನೆ. ಹೀಗಾಗಿ ನಮ್ಮ ಆಪ್ತರೆಲ್ಲರನ್ನೂ ಮಾತನಾಡಿಸಿಕೊಂಡು ಹೋಗಲು ಮಸ್ಕಿಗೆ ಬಂದಿದ್ದೇನೆ. ರಾಜಕೀಯ ಪ್ರವೇಶ ಕುರಿತ ಎಲ್ಲಾ ಪ್ರಶ್ನೆಗಳಿಗೆ ಡಿಸೆಂಬರ್ 25ಕ್ಕೆ (December 25) ಉತ್ತರ ನೀಡುತ್ತೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಹೇಳಿದ್ದಾರೆ.
ಮಸ್ಕಿ ಹೊರವಲಯದ ರೆಸಾರ್ಟ್‌ವೊಂದರಲ್ಲಿ ತಮ್ಮ ಬೆಂಬಲಿಗರು ಮತ್ತು ಆಪ್ತರೊಂದಿಗೆ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ, ಕಳೆದ 18 ವರ್ಷದಿಂದ ಮಸ್ಕಿಗೆ ನಾನು ಬರುತ್ತಿದ್ದೇನೆ. ಮಸ್ಕಿಯಲ್ಲಿ ನೂರಾರು ಜನರ ಜೊತೆಗೆ ನನ್ನ ಒಡನಾಟವಿದೆ. ರಾಜಕೀಯ ಜೀವನ ಆರಂಭಿಸಲು ಆಪ್ತರ ಭೇಟಿಗೆ ಮಸ್ಕಿಗೆ ಬಂದಿದ್ದೇನೆ. ನಾಳೆ ಗಂಗಾವತಿಯಲ್ಲಿ ದುರ್ಗಾದೇವಿ ಜಾತ್ರೆ ಇದೆ. ಆ ಜಾತ್ರೆಯಲ್ಲಿ ಭಾಗವಹಿಸುತ್ತೇನೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ರಸ್ತೆಗಳು ಗುಂಡಿ ಮುಕ್ತ ಆಗದಿದ್ರೆ ಇಂಜಿನಿಯರ್‌ಗಳ ಸಂಬಳ ಕಟ್: BBMP ಕಮಿಷನರ್ ವಾರ್ನಿಂಗ್
ಗಂಗಾವತಿಯಲ್ಲಿ ಮನೆ ಮಾಡಿ ಉತ್ತರ ಕರ್ನಾಟಕದೊಂದಿಗೆ ಓಡಾಟ ಹೆಚ್ಚಿಸಲು ಪ್ಲಾನ್ ಇದೆ. ಡಿಸೆಂಬರ್ 25ರಂದು ಮಹನೀಯರು ಜನಿಸಿದ ದಿನವಾಗಿದೆ. ಡಿ.25 ರಂದು ಎಲ್ಲಾ ಮಾಹಿತಿ ನೀಡುತ್ತೇನೆ. ನನ್ನ ಜೊತೆ ಯಾರು ಇರ್ತಾರೆ ಯಾರು ಬರ್ತಾರೆ ಅನ್ನೋದನ್ನು ಹೇಳುತ್ತೇನೆ. ಎಲ್ಲಾ ಪ್ರಶ್ನೆಗಳಿಗೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್‍ನಲ್ಲಿ ಉತ್ತರ ಸಿಗುತ್ತೆ ಎಂದು ಹೇಳುವ ಮೂಲಕ ಜನಾರ್ಧನ ರೆಡ್ಡಿ ತಮ್ಮ ರಾಜಕೀಯ ನಡೆಯ ಗುಟ್ಟು ಬಿಟ್ಟುಕೊಟ್ಟಿಲ್ಲ. ಸ್ಥಳೀಯ ಮುಖಂಡರು, ಮಾನ್ವಿ ಕ್ಷೇತ್ರದ ಕಾಂಗ್ರೆಸ್ (Congress), ಬಿಜೆಪಿ (BJP) ಟಿಕೆಟ್ ಆಕಾಂಕ್ಷಿಗಳು ಸೇರಿ ಹಲವರು ಜನಾರ್ದನ ರೆಡ್ಡಿ ಜೊತೆ ಸಭೆಯನ್ನು ನಡೆಸಿದ್ದಾರೆ. ಇದನ್ನೂ ಓದಿ: 5 ಲಕ್ಷದ ವಾಚ್ ವಿವಾದ: ದೇಶಭಕ್ತಿಯ ಟ್ವಿಸ್ಟ್ ನೀಡಿ ಸವಾಲೆಸೆದ ಅಣ್ಣಾಮಲೈ
Live Tv
[brid partner=56869869 player=32851 video=960834 autoplay=true]