– ಮುಸ್ಲಿಮರ ತುಷ್ಠೀಕರಣ ಅಂತ ಬಿಜೆಪಿ ಕೌಂಟರ್
ಮೈಸೂರು: ಇಲ್ಲಿನ ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿ ಸಂಬಂಧ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರೇ ಮುಸ್ಲಿಮರ ವೇಷದಲ್ಲಿ ಕಲ್ಲು ತೂರಿದ್ದರು ಅಂತ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಮಾಡಿರುವ ಆರೋಪದ ಕಿಡಿ ಇನ್ನೂ ಮಾಸಿಲ್ಲ. ಅದಾಗಲೇ ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಕೂಡ ತುಪ್ಪ ಸುರಿದಿದ್ದಾರೆ.
Advertisement
ಮೈಸೂರಿನ ಉದಯಗಿರಿ ಗಲಾಟೆ ಬಿಜೆಪಿ, ಆರ್‌ಎಸ್‌ಎಸ್ ಕೃಪಾಪೋಷಿತ ಕೃತ್ಯ. ಸಂಘ ಪರಿವಾರದವರು ಕೆಲವು ಕಡೆ ಬುರ್ಖಾ ಹಾಕೊಂಡು ಗಲಾಟೆ ಮಾಡೋಕೆ ಹೋಗಿಬಿಡ್ತಾರೆ. ಇದೇನು ಹೊಸದಲ್ಲ. ನನ್ನ ಹತ್ತಿರ ವಿಡಿಯೋ ಇದೆ. ಶಾಂತಿ ಕದಡುವ ಯತ್ನ ಇವರೇ ಮಾಡ್ತಿದ್ದಾರೆ. ತನಿಖೆ ಮಾಡಿಸಿ ಅಂತ ಗೃಹ ಸಚಿವರಿಗೆ ಹರಿಪ್ರಸಾದ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಉದಯಗಿರಿ ಗಲಭೆ ಕೇಸ್ – ದಾಂಧಲೆ ಮಾಡುವವರ ವಿರುದ್ಧ ಬುಲ್ಡೋಜರ್ ಕ್ರಮ ಆಗುತ್ತಾ? – ಪರಮೇಶ್ವರ್ ಹೇಳಿದ್ದೇನು?
Advertisement
ಇದಕ್ಕೆ ಸಂಸದ ಶೆಟ್ಟರ್ ಕೌಂಟರ್ ಕೊಟ್ಟಿದ್ದು, ಇದೆಲ್ಲಾ ಮುಸ್ಲಿಮರ ತುಷ್ಠೀಕರಣಕ್ಕಾಗಿ ಅಂತ ಕಿಡಿಕಾರಿದ್ದಾರೆ. ಸಂಸದ ಬೊಮ್ಮಾಯಿ ಕೂಡ ಪೊಲೀಸರು ರಾಜಕೀಯ ಒತ್ತಡದಲ್ಲಿದ್ದಾರೆ ಅಂತ ಆರೋಪಿಸಿದ್ದಾರೆ. ಇದನ್ನೂ ಓದಿ: ಮೈಸೂರು ಉದಯಗಿರಿ ಗಲಭೆ ಕೇಸ್ – ಘಟನೆಯಲ್ಲಿ ಭಾಗಿಯಾದವರನ್ನ ಮುಲಾಜಿಲ್ಲದೇ ಬಂಧಿಸಿ: ಸಿಎಂ ಸೂಚನೆ