ಬೆಂಗಳೂರು: ಚುನಾವಣೆ ಹೊಸ್ತಿಲಿನಲ್ಲಿ ರಾಜಕೀಯ ನಾಯಕರು ಹೋಮ ಹವನ ಮಾಡಿಸಲು ನಾ ಮುಂದೆ ತಾ ಮುಂದೆ ಎಂದು ಮುಗಿ ಬೀಳುತ್ತಿದ್ದಾರೆ. ಚುನಾವಣೆ ಎದುರಿಸಲು ರಾಜಕೀಯ ನಾಯಕರುಗಳು ಪ್ರತ್ಯಂಗಿರಾ ಹೋಮ ಹವನದ ಮೊರೆ ಹೋಗುತ್ತಿದ್ದಾರೆ.
ರಾಜಕೀಯ ಜೀವನದಲ್ಲಿ ಅಡ್ಡಿಯಾಗುವ ಶತ್ರುಗಳನ್ನ ಸಂಹಾರ ಮಾಡಿಸಲು ಪ್ರತ್ಯಂಗಿರಾ ಹೋಮವನ್ನ ರಾಜಕೀಯ ನಾಯಕರು ಮಾಡುತ್ತಿದ್ದಾರೆ. ಪವರ್ ಮಿನಿಸ್ಟರ್ ಡಿ.ಕೆ ಶಿವಕುಮಾರ್ ಬುಧವಾರ ಬೆಳಗ್ಗೆ ಬೆಂಗಳೂರಿನ ಉತ್ತರಹಳ್ಳಿಯ ತುರಹಳ್ಳಿಯಲ್ಲಿರುವ ಪ್ರತ್ಯಂಗಿರಾ ದೇವಸ್ಥಾನದಲ್ಲಿ ಹೋಮ ಮಾಡಿಸಿದ್ದಾರೆ.
Advertisement
Advertisement
ಸಂಜೆ ಸುಮಾರು ಏಳು ಗಂಟೆಗೆ ಶಾಸಕ ಅಖಂಡ ಶ್ರೀನಿವಾಸ್ ಕೂಡ ಪ್ರತ್ಯಂಗಿರಾ ಹೋಮ ಮಾಡಿಸಿದ್ದಾರೆ. ರಾಜಕೀಯ ಶತ್ರುಗಳನ್ನ ಮಟ್ಟ ಹಾಕಲು ಪ್ರತ್ಯಂಗಿರಾ ಹೋಮ ರಾಮಬಾಣವಾಗಿರುವುದರಿಂದ ಸಿಎಂ ಪಿಎ ವೆಂಕಟೇಶ್ ಕೂಡ ಪ್ರತ್ಯಂಗಿರಾ ಹೋಮ ಮಾಡಿಸಲು ಅನುಮತಿ ಕೇಳಿದ್ದಾರಂತೆ.
Advertisement
ಇನ್ನು ಕೆಲ ಬಿಜೆಪಿ ನಾಯಕರು ಕೂಡ ಪ್ರತ್ಯಂಗಿರಾ ಹೋಮ ಮಾಡಿಕೊಡುವಂತೆ ದೇವಸ್ಥಾನದ ಅರ್ಚಕರಿಗೆ ದುಂಬಾಲು ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.