ತಿರುವನಂತಪುರಂ: ಕೇರಳದಲ್ಲಿ ರಾಜಕೀಯ ಸಂಘರ್ಷದ ಸರಣಿ ಕೊಲೆ ಮುಂದುವರೆದಿದ್ದು, ಇಂದು ಆರ್‍ಎಸ್‍ಎಸ್ ಸಂಘಟನೆಯ ಕಾರ್ಯಕರ್ತರೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
28 ವರ್ಷದ ವಾಡೆಕೆತಲಾ ಆನಂದನ್ ಕೊಲೆಯಾದ ಆರ್‍ಎಸ್‍ಎಸ್ ಕಾರ್ಯಕರ್ತ. ಆನಂದನ್ ಸಿಪಿಐಎಂ ಪಕ್ಷದ ಸದಸ್ಯ ಮೊಹಮ್ಮದ್ ಕಾಸಿಮ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
Advertisement
ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ವೇವಾಲಯ್ಡ್ ಪ್ರದೇಶದ ಗುರುವೂರು ದೇವಾಲಯ ಬಳಿ ಬೈಕ್ ನಲ್ಲಿ ಆನಂದ್ ಹೋಗುತ್ತಿದ್ದ ವೇಳೆ ಆನಂದನ್‍ರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
#Kerala: An RSS worker allegedly murdered in Thrissur. More details awaited.
— ANI (@ANI) November 12, 2017
Advertisement
ಈ ಹಿಂದೆ ನಡೆದ ಸಿಪಿಐಎಂ ಕಾರ್ಯಕರ್ತರೊಬ್ಬರ ಕೊಲೆಯ ದ್ವೇಷದ ಹಿನ್ನೆಲೆಯಲ್ಲಿ ಅನಂದನ್ ಕೊಲೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅನಂದನ್ ಕೊಲೆಯನ್ನು ಖಂಡಿಸಿ ಆರ್‍ಎಸ್‍ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆಯನ್ನು ನಡೆಸಲು ನಿರ್ಧಾರಿಸಿದ್ದಾರೆ. ಘಟನಾ ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಹೇಳಿದ್ದಾರೆ.
Advertisement
ರಾಜ್ಯ ವ್ಯಾಪಿ ನಡೆಯುತ್ತಿರುವ ಆರ್‍ಎಸ್‍ಎಸ್ ಹಾಗೂ ಬಿಜೆಪಿ ನಾಯಕರ ಕೊಲೆಗಳನ್ನು ಜಿಹಾದಿ ಭಯೋತ್ಪದನೆ ಎಂದು ಆರೋಪಿಸಿ ಕೆಲ ದಿನಗಳ ಹಿಂದೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಕುಮ್ಮಮಾನಂ ರಾಜಶೇಖರನ್ ಅವರು ರಾಜ್ಯಾದ್ಯಂತ ಜನರಕ್ಷಾ ಯಾತ್ರೆಯನ್ನು ನಡೆಸಲಾಗಿತ್ತು. ಈ ಯಾತ್ರೆಯಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು. ಈ ಯಾತ್ರೆಯಲ್ಲಿ ಪಾಲ್ಗೊಂಡು ಅಮಿತಾ ಶಾ ದೇವರನಾಡಲ್ಲಿ ರಾಕ್ಷಸರ ಆಡಳಿತ ನಡೆಯುತ್ತಿದೆ ಎಂದು ಆರೋಪಿಸಿದ್ದರು.
#UPDATE RSS worker Anand was allegedly murdered in Kerala's Thrissur. He was an accused in the murder case of a CPIM activist 4 years ago pic.twitter.com/Bvm3wmNs8M
— ANI (@ANI) November 12, 2017
Kerala RSS Worker, Out On Bail In Murder Case, Stabbed To Death https://t.co/u8F6igNP3P #NDTVNewsBeeps pic.twitter.com/aXqYLC6xey
— NDTV (@ndtv) November 12, 2017