ಬೆಂಗಳೂರು: ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ತಡರಾತ್ರಿ ಐದಾರು ಬೈಕ್‍ಗಳಲ್ಲಿ ಆಗಮಿಸಿದ ದುಷ್ಕರ್ಮಿಗಳು ಮಚ್ಚು-ಲಾಂಗುಗಳನ್ನು ಝಳಪಿಸಿ ಸಾರ್ವಜನಿಕರ ಸ್ವತ್ತುಗಳನ್ನು ಜಖಂಗೊಳಿಸಿರುವ ಘಟನೆ ನಗರದ ಚೋಳರಪಾಳ್ಯದಲ್ಲಿ ನಡೆದಿದೆ.
ಚೋಳರಪಾಳ್ಯದ 2ನೇ ಕ್ರಾಸ್‍ನಲ್ಲಿರುವ ಕಾಂಗ್ರೆಸ್ ಕಚೇರಿಗೆ ನುಗ್ಗಿರುವ ದುಷ್ಕರ್ಮಿಗಳು ಹಲವು ವಸ್ತುಗಳನ್ನು ನಾಶಪಡಿಸಿದ್ದು ನಂತರ ಚೋಳರಪಾಳ್ಯದ ಗಲ್ಲಿಗಳಲ್ಲಿ ನಿಲ್ಲಿಸಿದ್ದ 25ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದ್ದಾರೆ. ಇನ್ನು ಚುನಾವಣಾ ಸಂದರ್ಭದಲ್ಲಿ 2 ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿತ್ತು.
Advertisement
ಇದೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕೃತ್ಯ ಎಸಗಿರುವ ಸಾಧ್ಯತೆಯಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೆಪಿ ಅಗ್ರಹಾರ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.