ಬೆಂಗಳೂರು: ರಾಜ್ಯದ ರಾಜಕೀಯ ಬೆಳವಣಿಗೆಗಳು ಸರಿಯಲ್ಲ. ಇದು ಹೀಗೆ ಮುಂದುವರೆದರೆ ಜನ ಕಲ್ಲಲ್ಲಿ ಹೊಡೆಯುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ (D K Suresh) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು ಇತ್ತೀಚಿನ ಬೆಳವಣಿಗೆಗಳು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದಲ್ಲಿ ಕಾಂಗ್ರೆಸ್, ದೇಶದಲ್ಲಿ ಎನ್‌ಡಿಎ ಅವಕಾಶ ಕೊಟ್ಟಿರೋದು ಅಭಿವೃದ್ಧಿ ಮಾಡುವುದಕ್ಕೆ. ಆರೋಪ ಪ್ರತ್ಯಾರೋಪ ದೂಷಣೆ ಮಾಡುತ್ತಾ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ. ದಸರಾ (Dasara) ವೇಳೆ ಚಾಮುಂಡೇಶ್ವರಿ ಪೂಜಿಸುವ ಸಂದರ್ಭದಲ್ಲಿ ನೊಂದು ಹೇಳುತ್ತಿದ್ದೇನೆ. ಈ ರೀತಿ ಬೀದಿಯಲ್ಲಿ ಕಿತ್ತಾಟ ಮಾಡೋದು ಸರಿಯೇ ಎಂದು ಆತ್ಮಾವಲೋಕನಾ ಮಾಡಿಕೊಳ್ಳಬೇಕಿದೆ ಎಂದರು. ಇದನ್ನೂ ಓದಿ: Amethi Horror | `ಐವರು ಸಾಯ್ತಾರೆʼ – ಕೊಲೆಗೂ ಮುನ್ನವೇ ವಾಟ್ಸಾಪ್‌ನಲ್ಲಿ ಶಂಕಿತನ ವಾರ್ನಿಂಗ್!
Advertisement
Advertisement
ಚುನಾವಣೆಗೆ ಇನ್ನೂ 4 ವರ್ಷ ಇದೆ. ಈ ಬೆಳವಣಿಗೆ ರಾಜ್ಯದ ಜನರಿಗೆ ಎಳ್ಳಷ್ಟು ಇಷ್ಟವಿಲ್ಲ. ಇದೇ ರೀತಿ ಮುಂದುವರೆದರೆ ಜನ ಕಲ್ಲಲ್ಲಿ ಹೊಡೆಯುತ್ತಾರೆ. ನಾನು ಮೂರು ಪಕ್ಷಗಳಿಗೆ ಎಚ್ಚರಿಕೆಯಾಗಿ ಹೇಳುತ್ತಿದ್ದೇನೆ ದಿನೇ ದಿನೇ ಇದೇ ವಿಚಾರವನ್ನ ದೊಡ್ಡದು ಮಾಡಬಾರದು. ಚನ್ನಪಟ್ಟಣ ಚುನಾವಣೆಗೆ 50 ಕೋಟಿ ರೂ. ಡಿಮ್ಯಾಂಡ್ ವಿಚಾರ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ದೂಷಣೆಗಳೇ ಹೆಚ್ಚಾಗಿವೆ. ಇದರಿಂದ ಕನ್ನಡಿಗರಿಗೆ ಮುಜುಗರ ತರುತ್ತಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: Bengaluru | ಪಿಜಿಯ 5ನೇ ಮಹಡಿಯಿಂದ ಜಿಗಿದು ಟೆಕ್ಕಿ ಯುವತಿ ಆತ್ಮಹತ್ಯೆ
Advertisement
ಸಾಕಷ್ಟು ಸಮಸ್ಯೆಗಳು ಇವೆ. ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು. ಅದನ್ನ ಬಿಟ್ಟು ಬೀದಿಗಿಳಿದು ಕಿತ್ತಾಡುವುದು ಸರಿಯಲ್ಲ. ಇದನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನ ನಿರೀಕ್ಷೆ ಮಾಡುತ್ತಿರುವುದು ರಾಜ್ಯದ ಅಭಿವೃದ್ಧಿ, ರೈತರ ಅಭಿವೃದ್ಧಿ, ಯುವ ಜನಪರ ಅಭಿವೃದ್ಧಿ. ಯಾವುದೇ ರಾಜಕೀಯ ಪಕ್ಷವಿರಲಿ ಇದರ ಬಗ್ಗೆ ಅವರು ಗಮನಹರಿಸಬೇಕು. ಜನ ಅಂತಹ ಪರಿಸ್ಥಿತಿಗೆ ಇಳಿಯಬಹುದು. ನ್ಯಾಯಾಲಯ ತೀರ್ಪು ಕೊಡಲಿದೆ. ಎಲ್ಲರ ಮೇಲೆ ತನಿಖೆಗಳು ನಡೆಯುತ್ತಿವೆ. ಆದೇಶಗಳು ಬರುವವರೆಗೆ ಕಾಯಬೇಕು. ಪ್ರತಿದಿನ ಇದನ್ನೇ ದೊಡ್ಡದು ಮಾಡುವುದು ಸರಿಯಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಂಗಳೂರು ದಸರಾ| ಅ.6ರಂದು ಹಾಫ್ ಮ್ಯಾರಥಾನ್
Advertisement
ಕಳ್ಳರು ಒಂದಾಗಿದ್ದಾರೆಂಬ ಸ್ನೇಹಮಯಿ ಕೃಷ್ಣ (Snehamayi Krishna) ಆರೋಪ ರಾಜಕೀಯ ದೊಂಬರಾಟ ನಿಲ್ಲಲಿ. ಅವರ ಕೆಲಸ ಏನು ದೂರು ಕೊಡಬೇಕು ಕೊಟ್ಟಿದ್ದಾರೆ. ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ತನಿಖೆಯಲ್ಲಿ ತಪ್ಪು ಸರಿ ಹೊರಬರಲಿದೆ. ತನಿಖಾಧಿಕಾರಿಗಳಿಗೆ ಮುಕ್ತ ಅವಕಾಶ ಕೊಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಭಯೋತ್ಪಾದನೆ ಆರೋಪದಿಂದ ಕುಟುಂಬ ರಕ್ಷಿಸಲು 2.5 ಕೋಟಿ ಲಂಚಕ್ಕೆ ಬೇಡಿಕೆ – NIA ಅಧಿಕಾರಿಯನ್ನೇ ಬಂಧಿಸಿದ ಸಿಬಿಐ