ಪೋಲಂಡ್ : ಬೀರ್ ಪ್ರಿಯರು ಪ್ರತಿಬಾರಿ ಕುಡಿಯುವಾಗ ಹೊಸ ಬ್ರ್ಯಾಂಡ್ ಹುಡುಕುತ್ತಿರುತ್ತಾರೆ. ಕೆಲ ಪಡ್ಡೆ ಹುಡುಗರು ಮೊದಲ ಪೆಗ್‍ನಲ್ಲಿಯೇ ಕಿಕ್ ಸಿಗಬೇಕೆಂಬ ಮಾತುಗಳನ್ನು ಆಡುತ್ತಿರುತ್ತಾರೆ. ಆದರೆ ಪೋಲಂಡ್ ದೇಶದ ಪೊಲೀಶ್ ಎಂಬ ಕಂಪೆನಿ ವಿಶ್ವದಲ್ಲೇ ಮೊದಲ ಬಾರಿಗೆ ಚೆಂದುಳ್ಳಿ ಚೆಲುವೆಯರ ಗುಪ್ತಾಂಗ(ಯೋನಿ)ದಿಂದ ಹೊಸ ಮಾದರಿಯ ಬಿಯರ್ ತಯಾರಿಸಿದೆ. ಜುಲೈ 28 ರಂದು ಬಿಯರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಕೆಲ ದಿನಗಳಿಂದ ಭಾರತದಲ್ಲಿಯೂ ಭಾರೀ ಚರ್ಚೆಯ ವಿಷಯವಾಗಿದೆ.
ಜುಲೈ 28 ಪೊಲಿಶ್ ಸಿಟಿಯ ಮಾರುಕಟ್ಟೆಯಲ್ಲಿ ವಗಿನಾ ಬಿಯರ್ ಲಭ್ಯವಿದ್ದು, ಕಂಪೆನಿ ತನ್ನ ಮದ್ಯದ ಬಾಟಲಿಗೆ ‘ದ ಆರ್ಡರ್ ಆಫ್ ಯೋನಿ’ (The Order of Yoni) ಎಂಬ ಸಂಸ್ಕೃತ ಹೆಸರನ್ನಿಟ್ಟು ಮಾರುಕಟ್ಟೆಗೆ ಪರಿಚಯಿಸಿದೆ. ಮಹಿಳೆಯರ ಗುಪ್ತಾಂಗದಿಂದ ತಯಾರಿಸಿದ ಈ ಮದ್ಯದ ಬಾಟಲ್‍ಗಳಲ್ಲಿ ಎರಡು ಮಾದರಿ ಇದ್ದು, ಒಂದು ಬಾಟಲ್ ಆಫ್ ಲಸ್ಟ್ ಮತ್ತೊಂದು ಬಾಟಲ್ ಆಫ್ ಪ್ಯಾಶನ್ ಎರಡೂ ಬಾಟಲ್‍ಗಳು ಶೇ. 8ರಷ್ಟು ಆಲ್ಕೋಹಾಲ್ ಪ್ರಮಾಣವನ್ನು ಹೊಂದಿರುತ್ತವೆ. ಸದ್ಯ ಈ ಮದ್ಯದ ಪೊಲಿಶ್ ಸಿಟಿಯಲ್ಲಿ ಮಾತ್ರ ಲಭ್ಯವಿದ್ದು, ಒಂದು ಬಾಟಲ್ ಗೆ 25 ಜೊಲ್ಟಿ (466 ರೂ.) ಬೆಲೆ ನಿಗದಿ ಮಾಡಿದೆ.
Advertisement
Advertisement
ಹೇಗೆ ತಯಾರುಗುತ್ತೆ?
ಮೊದಲಿಗೆ ಚಲುವೆಯರ ಯೋನಿಯಿಂದ Gynaelogical Stick ಬಳಸಿ ಆಮ್ಲವನ್ನು ಹೊರ ತೆಗೆಯಲಾಗುತ್ತದೆ. ಹೊರ ಬಂದ ಆಮ್ಲದಿಂದ ಅದರಲ್ಲಿ ಸ್ತ್ರಿತನ (lactic acid bacteria) ವನ್ನು ಬೇರ್ಪಡಿಸಿ ಹಲವು ಹಂತಗಳಲ್ಲಿ ಶುದ್ಧೀಕರಿಸಲಾಗುತ್ತದೆ. ಶುದ್ಧೀಕರಿಸಿದ ಆಮ್ಲದಲ್ಲಿ ನೀರು ಸೇರಿದಂತೆ ಮದ್ಯ ತಯಾರಿಕೆಯಲ್ಲಿ ಬಳಸುವ ವಸ್ತುಗಳನ್ನು ಮಿಶ್ರಣ ಮಾಡಲಾಗುತ್ತದೆ. ಕೊನೆಗೆ ಅಲ್ಲಿ ತಯಾರದ ಮದ್ಯವನ್ನು Poznan lab ಗೆ ಕಲಸಿ ಗುಣಮಟ್ಟತೆಯನ್ನು ಖಾತ್ರಿ ಮಾಡಿಕೊಂಡ ನಂತರವೇ ಬಾಟಲ್ ಸೀಲ್ ಆಗುತ್ತದೆ.
Advertisement
2016ರಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದ ಕಂಪೆನಿ 2018ರಲ್ಲಿ ಪೂರ್ಣಗೊಳಿಸಿದೆ. ತಾನು ಯಾವ ಚೆಲುವೆಯ ಯೋನಿಯಿಂದ ತಯಾರಿಸಿದ ಮದ್ಯವನ್ನು ಕುಡಿಯುತ್ತಿದ್ದೇನೆ ಎಂಬುವುದು ಆ ಗ್ರಾಹಕನಿಗೆ ತಿಳಿಯಲು ಬಾಟಲಿಯಲ್ಲಿ ಚೆಲುವೆಯ ಫೋಟೋವನ್ನು ಮುದ್ರಿಸಲಾಗಿದೆ. ಬಾಟಲ್ ಮೇಲೆ ಮದ್ಯ ಸೇವಿಸುವಾಗ ಯಾವ ರೀತಿಯ ಫೀಲ್ ಮಾಡಬೇಕೆಂಬುದುನ್ನು ಸಹ ರೊಮ್ಯಾಂಟಿಕ್ ಸಾಲುಗಳನ್ನು ಕಂಪೆನಿ ತನ್ನ ವೆಬ್‍ಸೈಟ್ ನಲ್ಲಿ ತಿಳಿಸಿದೆ.
Advertisement
ಕೆಲ ಮಹಿಳೆಯರು ಮದ್ಯದ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಇದು ಸ್ತ್ರೀತನಕ್ಕೆ (Sick And Misogynistic) ಅವಮಾನ ಎಂದು ಆಕ್ರೋಶ ಹೊರಹಾಕಿದ್ದಾರೆ. ಮತ್ತೆ ಕೆಲವರು ಈ ಮದ್ಯದ ಸೇವನೆಯಿಂದ ಪುರುಷರ ಆರೋಗ್ಯದಲ್ಲಿ ಏರಳಿತ ಉಂಟಾಗುವ ಸಾಧ್ಯತೆಗಳಿರಬಹುದು ಎಂದು ಭಯವನ್ನು ವ್ಯಕ್ತಪಡಿಸಿದ್ದಾರೆ.
ಮದ್ಯ ತಯಾರಿಸುವಾಗ ಹಲವು ಹಂತಗಳಲ್ಲಿ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ (lactic acid bacteria) ನ್ನು ಬೇರ್ಪಡಿಸಲಾಗುತ್ತದೆ. ಬ್ಯಾಕ್ಟಿರಿಯಾ ಬೇರ್ಪಡಿಸಿದ ಬಳಿಕ ಮದ್ಯವನ್ನು ಪೂಜ್ನಾನ್ ಪ್ರಯೋಗಾಲಯದಲ್ಲಿ ಎರಡು ಬಾರಿ ಪರೀಕ್ಷಿಸಲಾಗುತ್ತದೆ. ಪ್ರಯೋಗಾಲಯದಿಂದ ಬಾಟಲ್‍ಗಳು ಕಂಪೆನಿ ಸೇರಿದಾಗ ಅದರ ದಿನಾಂಕ ಮತ್ತಿತರ ಲೇಬಲ್ ಹಾಕಲಾಗುವುದು. ಹೀಗೆ ಹತ್ತು ಹಲವು ವಿವಿಧ ಮಾರ್ಗಗಳಲ್ಲಿ ನಾವು ಪರಿಶೀಲಿಸುತ್ತೇವೆ ಎಂದು ಕಂಪೆನಿ ಜಾಹೀರಾತಿನಲ್ಲಿ ಹೇಳಿ ತನ್ನ ಉತ್ಪನ್ನದ ವಿರುದ್ಧ ಬಂದಿರುವ ಆರೋಪಗಳನ್ನು ತಳ್ಳಿ ಹಾಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews