ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ವಿರುದ್ಧ ಪೊಲೀಸರ ಸೈಲೆಂಟ್ ಸಮರ

Public TV
1 Min Read
wheeling scoundrels

ಬೆಂಗಳೂರು: ನಗರದ ರೋಡ್ ರೇಜ್ ಜೊತೆಗೆ ವ್ಹೀಲಿಂಗ್  ಮಾಡುವ ಪುಂಡರ ವಿರುದ್ಧ ಪೊಲೀಸರು ಸೈಲೆಂಟ್ ಸಮರ ಸಾರಿದ್ದಾರೆ.

ವ್ಹೀಲಿಂಗ್ (wheeling) ಮಾಡುವವರು, ರಸ್ತೆಯಲ್ಲಿ ಸುಮ್ ಸುಮ್ನೆ ಕಿರಿಕ್ ತೆಗೆದು ಹಲ್ಲೆ ಮಾಡುವವರು, ಸಾಮಾಜಿಕ ಜಾಲತಾಣದಲ್ಲಿ (Social Media) ಬಿಲ್ಡಪ್‌ಗಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವವರೆಲ್ಲರ ವಿರುದ್ಧ ಪೊಲೀಸರು (Police) ಸಾಮಾಜಿಕ ಜಾಲತಾಣದಲ್ಲಿಯೇ ಖಡಕ್ ಸಂದೇಶ ರವಾನಿಸುತ್ತಿದ್ದಾರೆ. ಇದನ್ನೂ ಓದಿ: ಕೋಟಿಗಟ್ಟಲೇ ಅನುದಾನ ಕೊಟ್ಟರೂ ನೀಗದ ಸಮಸ್ಯೆ – 4 ದಿನಗಳಿಂದ ಮಂಡ್ಯದ ಮೈಶುಗರ್ ಸ್ಥಗಿತ

ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಗಿಟ್ಟಿಸಲು ರಸ್ತೆಗಳಲ್ಲಿ ವ್ಹೀಲಿಂಗ್ ಮಾಡೋರಿಗೆ ಬಿಫೋರ್ ಆಫ್ಟರ್ ವಿಡಿಯೋ ಮಾಡುವ ಮೂಲಕ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ. ನೀವೆನಾದರೂ ಇಂತಹ ಕೃತ್ಯಗಳನ್ನು ಮಾಡುತ್ತಿದ್ದರೆ ಬಂಧನದ ಜೊತೆಗೆ ಬಿಫೋರ್ ಆಫ್ಟರ್ ವಿಡಿಯೋಗೆ ಒಳಗಾಗೊದು ಖಚಿತ.

ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಬಿಫೋರ್ ಆಫ್ಟರ್ ವೀಡಿಯೋಗಳು ಫುಲ್ ವೈರಲ್ ಆಗುತ್ತಿದ್ದು, ಇಂತಹ ವೀಡಿಯೋಗಳ ಮೂಲಕ ಪುಂಡರ ಹಾವಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ – ಮೂವರು ಅರೆಸ್ಟ್

ಪ್ರತಿನಿತ್ಯದ ಘಟನೆಗಳನ್ನು ಪೊಲೀಸರು ಸಕ್ರಿಯವಾಗಿ ಇನ್ಸ್ಟಾಗ್ರಾಂ (Instagram), ಎಕ್ಸ್ (X), ಫೇಸ್‌ಬುಕ್‌ನಲ್ಲಿ (Facebook) ಬಿಫೋರ್ ಆಫ್ಟರ್ ವೀಡಿಯೋ ಮಾಡಿ ಪೋಸ್ಟ್ ಮಾಡುವ ಮೂಲಕ ಪುಂಡರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

Share This Article