ನೆಲಮಂಗಲ: ನಗರದ ಹೊರವಲಯದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳಿದ್ದು, ಅಪರಾಧ ಮಾಡಿ ಕ್ಷಣಾರ್ಧದಲ್ಲಿ ಆರೋಪಿಗಳು ನಾಪತ್ತೆಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಪರಾಧಗಳ ಕಡಿವಾಣಕ್ಕೆ ಹೊಸ ತಂತ್ರ ಮಾಡಿದ್ದಾರೆ.
ಇತ್ತೀಚೆಗೆ ನೆಲಮಂಗಲ ನಗರದಲ್ಲಿ ಯುವಕರ ಗುಂಪುಗಳ ನಡುವೆ ಗಲಾಟೆ ನಡೆಯುತ್ತಿತ್ತು. ಇದಕ್ಕಾಗಿ ನೆಲಮಂಗಲ ಟೌನ್ ಪೊಲೀಸರು ವಿಶೇಷವಾದ ಕಾರ್ಯಾಚರಣೆ ನಡೆಸಿದ್ದಾರೆ. ಕತ್ತಲು ಆವರಿಸುತ್ತಿದ್ದ ಹಾಗೆ ಯುವಕರ ಗುಂಪು ಟೀ ಅಂಗಡಿ, ವೈನ್ ಶಾಪ್, ಇನ್ನಿತರ ಕಡೆ ಸೇರುತ್ತಾರೆ. ಇಂತಹ ಯುವಕರಿಗೆ ವಾರ್ನ್ ಮಾಡುವ ಮೂಲಕ ಪೊಲೀಸರು ಹೊಸ ರೀತಿಯ ನೈಟ್ ರೌಂಡ್ಸ್ ಶುರು ಮಾಡಿದ್ದಾರೆ.ಇದನ್ನೂ ಓದಿ: ಕುರಿಗಾಹಿ ಮೇಲೆ ಹಲ್ಲೆ ನಡೆಸಿ ಕುರಿ ಕದ್ದ ಖದೀಮರು
ಇನ್ನೂ ಖಾಸಗಿ ವಾಹನದಲ್ಲಿ ತೆರಳಿದ ನೆಲಮಂಗಲ ಟೌನ್ ಇನ್ಸ್ಪೆಕ್ಟರ್ ಕುಮಾರ್ ನೇತೃತ್ವದ ಪೊಲೀಸರ ತಂಡ, ಅನವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡೋರಿಗೂ ವಾನಿರ್ಂಗ್ ನೀಡಿದ್ದಾರೆ. ಹೆಚ್ಚು ಅನುಮಾನ ಕಂಡುಬಂದ ಯುವಕರನ್ನು ವಶಕ್ಕೆ ಪಡೆದು, ಯುವಕರ ಸಂಜೆಯ ಮೋಜು-ಮಸ್ತಿಗೆ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಗದಗಿಗೆ ಸಿಎಂ ಬಾರ್ತಾರೆಂದು ತರಾತುರಿಯಲ್ಲಿ ರಸ್ತೆ ದುರಸ್ತಿ
ಅಪರಾಧ ಪ್ರಕರಣಗಳು ಹೆಚ್ಚದಂತೆ ನಗರದಲ್ಲಿ ಶಾಂತಿ ಕಾಪಾಡಲು ಪೊಲೀಸರು ಹೈ ಅಲರ್ಟ್ ಆಗಿದ್ದು, ಯಾವುದೇ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿದ್ದಾರೆ.