ಬಳ್ಳಾರಿ: ಇಬ್ಬರು ಪತ್ನಿಯರನ್ನು (Wife) ಮ್ಯಾನೇಜ್ ಮಾಡಲು ಹೋಗಿ ಪೇದೆಯೊಬ್ಬ (Police) ಬರ್ಬರವಾಗಿ ಹತ್ಯೆಯಾಗಿರುವ (Murder) ಘಟನೆ ಬಳ್ಳಾರಿ (Ballary) ಜಿಲ್ಲೆಯ ಚಿನ್ನಾಪುರ ಗ್ರಾಮದಲ್ಲಿ ನಡೆದಿದೆ.
ಡಿಆರ್ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದ ಜಾಫರ್ ಹತ್ಯೆಯಾದಾತ. ಬುಧವಾರ ರಾತ್ರಿ 10 ಗಂಟೆ ಹೊತ್ತಲ್ಲಿ ಡಿಎಆರ್ ಪೊಲೀಸ್ ಗ್ರೌಂಡ್ ಪಕ್ಕ ಇರುವ ಕ್ವಾಟ್ರಸ್‌ನ ತನ್ನ ಮನೆಯಲ್ಲೇ ಜಾಫರ್ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಆತನ ಪತ್ನಿ ಹನುಮಕ್ಕ ಯಾರೊ ಬಂದು ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಅಕ್ಕಪಕ್ಕದವರನ್ನು ಕರೆಸಿ ಅಳುತ್ತಾ ಚೀರಾಡಿದ್ದಾಳೆ. ತಕ್ಷಣ ಅಕ್ಕಪಕ್ಕದ ಪೊಲೀಸ್ ಸಿಬ್ಬಂದಿ ಜಾಫರ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಜಾಫರ್ ಉಸಿರು ನಿಂತು ಹೋಗಿತ್ತು.
Advertisement
Advertisement
ಆದರೆ ಈಗ ಜಾಫರ್‌ನ ಸಂಬಂಧಿಕರು ಆತನ ಪತ್ನಿ ಹನುಮಕ್ಕಳೇ ಕೊಲೆ ಮಾಡಿಸಿದ್ದಾಳೆ ಎಂದು ದೂರು ನೀಡಿದ್ದಾರೆ. ಅಲ್ಲದೇ ಪೊಲೀಸ್ ಕ್ವಾಟ್ರಸ್‌ನಲ್ಲಿ ಹೊರಗಿನವರು ಬಂದು ಹೊಡೆಯಲು ಸಾಧ್ಯವಿಲ್ಲ. ಇದೊಂದು ಪ್ರೀ ಪ್ಲಾನ್ ಮರ್ಡರ್. ಪ್ರೈಮರಿ ಸಸ್ಪೀಷಿಯಸ್ ಎಂದರೆ ಜಾಫರ್ ಪತ್ನಿ ಹನುಮಕ್ಕ ಎಂದು ಅನುಮಾನಿಸಿ ಪೊಲೀಸರು ಹನುಮಕ್ಕಳನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.
Advertisement
ಮುಸ್ಲಿಂ ಧರ್ಮದ ಜಾಫರ್ ಸಹೀಬ್ ಹಿಂದೂ ಯುವತಿ ಹನುಮಕ್ಕಳನ್ನು ಮದುವೆ ಆಗುವುದಕ್ಕೂ ಮೊದಲು ಇನ್ನೊಬ್ಬ ಮುಸ್ಲಿಂ ಮಹಿಳೆ ನವೀನ್ ತಾಜ್ ಜೊತೆ ಮದುವೆಯಾಗಿದ್ದ. ನವೀನ್ ತಾಜ್ ಈ ಹಿಂದೆ ಗರ್ಭಿಣಿಯಾಗಿದ್ದಾಗ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಓಡಾಡುತ್ತಿದ್ದ ವೇಳೆ ಅಲ್ಲಿದ್ದ ನರ್ಸ್ ಹನುಮಕ್ಕನ ಜೊತೆ ಪ್ರೇಮವಾಗಿತ್ತು. ಈ ವಿಚಾರ ಮೊದಲ ಪತ್ನಿ ನವೀನ್ ತಾಜ್‌ಗೆ ಗೊತ್ತಾಗಿ ಆಕೆ ಜಾಫರ್‌ನ ಬಿಟ್ಟು ತವರು ಸೇರಿದ್ದಳು. ಇದನ್ನೂ ಓದಿ: ಬೆಂಗಳೂರಲ್ಲಿ ಸಿಗರೇಟ್ ವಿಚಾರಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ
Advertisement
ಅದೇ ವೇಳೆ ಹನುಮಕ್ಕನ ಜೊತೆ ಜಾಫರ್ ಮದುವೆಯಾಗಿದ್ದು, ಇಲ್ಲಿಗೆ 4 ವರ್ಷ ಕಳೆದಿದೆ. ಆದರೆ ಈ ನಡುವೆ ಜಾಫರ್ ಮತ್ತೆ ತನ್ನ ಮೊದಲ ಪತ್ನಿ ಮನೆಗೆ ಓಡಾಟ ಶುರು ಮಾಡಿದ್ದಕ್ಕೆ ಹನುಮಕ್ಕ ಕೋಪಗೊಂಡು ಆತನ ಹತ್ಯೆಗೆ ಯೋಜನೆ ಮಾಡಿದ್ದಾಳೆ.
ಜಾಫರ್‌ಗೆ ಮತ್ತು ಬರುವ ಚುಚ್ಚು ಮದ್ದು ನೀಡಿ, ಆತನಿಗೆ ಪ್ರಜ್ಞೆ ತಪ್ಪಿಸಿ ಬಳಿಕ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾಳೆ ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಈಗ ಹನುಮಕ್ಕ ಪೊಲೀಸರ ವಶದಲ್ಲಿದ್ದಾಳೆ. ಇಬ್ಬರು ಹೆಂಡತಿಯರನ್ನು ಮ್ಯಾನೇಜ್ ಮಾಡಲು ಹೋದ ಜಾಫರ್ ಮಸಣ ಸೇರಿದ್ದಾನೆ. ತಂದೆ ಹತ್ಯೆಯಾಗಿ, ತಾಯಿ ಪೊಲೀಸರ ವಶದಲ್ಲಿರುವಾಗ ಈಗ ಮೂವರು ಮಕ್ಕಳು ಅನಾಥರಾಗಿದ್ದಾರೆ. ಇದನ್ನೂ ಓದಿ: ಮೆಡಿಕಲ್ ಸ್ಟೋರ್ ಮಾಲೀಕನಿಂದ ಶಸ್ತ್ರ ಚಿಕಿತ್ಸೆ – ರೋಗಿ ಸಾವು