ನವದೆಹಲಿ: ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿರುವ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ, ದೆಹಲಿ ಪೊಲೀಸ್ ಮೇಲೆ ಬಿಯರ್ ಬಾಟ್ಲಿಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ನಡೆದಿದ್ದೇನು?: ಉತ್ತರ ದೆಹಲಿಯ ಗುಲಾಬಿ ಬಾಗ್ ಪ್ರದೇಶದಲ್ಲಿ ಕಾರಿನಲ್ಲಿ ಮೂವರು ಜೋರಾಗಿ ಸೌಂಡ್ ಇಟ್ಟು ಹಾಡು ಕೇಳುತ್ತಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆಯೊಬ್ಬರು ಸೌಂಡ್ ಕಡಿಮೆ ಮಾಡುವಂತೆ ಹೇಳಿದ್ದಾರೆ. ಕಾರಿನಲ್ಲಿದ್ದವರು ಗಸ್ತು ತೀರುಗುತ್ತಿದ್ದ ಸಿಬ್ಬಂದಿಯನ್ನು ನಿಂದಿಸಲು ಪ್ರಾರಂಭಿಸಿದರು. ಪೊಲೀಸ್ ಕಾರಿನ ಸಂಖ್ಯೆಯನ್ನು ನಮೂದಿಸಿದರು. ತಮ್ಮ ಕಾರಿನ ನಂಬರ್ ನೋಟ್ ಆಗಿರುವುದನ್ನು ಅರಿತುಕೊಂಡ ಆರೋಪಿಗಳು ಮತ್ತೊಮ್ಮೆ ಯು-ಟರ್ನ್ ತೆಗೆದುಕೊಂಡು ಕಾರನ್ನು ಗಸ್ತು ತಿರುಗುತ್ತಿದ್ದ ಸಿಬ್ಬಂದಿಯತ್ತ ವೇಗವಾಗಿ ಚಲಾಯಿಸಿ ಕಾನ್‍ಸ್ಟೇಬಲ್‌ಗೆ ಡಿಕ್ಕಿ ಹೊಡೆಯಲು ಯತ್ನಿಸಿದರು ಆದರೆ ಎಚ್ಚೆತ್ತ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
Advertisement
ಕಾರಿನಲ್ಲಿದ್ದ ಮೂವರು ಕೈಯಲ್ಲಿ ಬಿಯರ್ ಬಾಟಲಿಗಳನ್ನು ಹಿಡಿದಿದ್ದರು. ಕಾರಿನಲ್ಲಿದ್ದವರಲ್ಲಿ ಒಬ್ಬನು ಬಿಯರ್ ಬಾಟಲಿಯಿಂದ ಕಾನ್‍ಸ್ಟೆಬಲ್ ಪ್ರದೀಪ್ ಅವರ ತಲೆಗೆ ಹೊಡೆದಿದ್ದಾನೆ. ತಕ್ಷಣವೇ ಮೂವರು ಎಸ್ಕೇಪ್ ಆಗಿದ್ದಾರೆ. ನಂತರ ಕಾನ್‍ಸ್ಟೇಬಲ್ ಪ್ರದೀಪ್ ಅವರನ್ನು ಚಿಕಿತ್ಸೆಗಾಗಿ ಗುಲಾಬಿ ಬಾಗ್‍ನ ಎನ್‍ಕೆಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್
Advertisement
Advertisement
ಪ್ರತ್ಯಕ್ಷದರ್ಶಿಯೊಬ್ಬರು ಕಾರು ಚಾಲಕನನ್ನು ಅಶೋಕ್ ಅಲಿಯಾಸ್ ಅಶು ಎಂದು ಗುರುತಿಸಿದ್ದಾರೆ. ಚಾಲಕನ ಪಕ್ಕದ ಸೀಟಿನಲ್ಲಿದ್ದ ವ್ಯಕ್ತಿ ಯಶು ಚೌಹಾನ್ ಇಬ್ಬರೂ ದೆಹಲಿಯ ಸರಾಯ್ ರೋಹಿಲ್ಲಾದ ಪದಮ್ ನಗರದ ನಿವಾಸಿಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?
ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನ್‍ಸ್ಟೇಬಲ್ ಪ್ರದೀಪ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಘಟನೆಯ ನಂತರ ಅಶೋಕ್ (22), ಯಶ್ ಪ್ರತಾಪ್ ಸಿಂಗ್ (22) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಾರ್ ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.