ಚೆನ್ನೈ: ಹೆಲ್ಮೆಟ್ (Helmate) ಧರಿಸಿ ವಾಹನ ಚಲಾಯಿಸುವಂತೆ ಸಲಹೆ ನೀಡಿದ ಬೈಕ್ ಸವಾರನಿಗೆ ಪೊಲೀಸ್ ಒಬ್ಬರು ಅವಾಜ್ ಹಾಕಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು, ಪೊಲೀಸ್ ಆಗಿರುವ ನಿಮಗೆ ಒಳ್ಳೆಯದಾಗಲಿ ಎಂದು ಹೇಳುತ್ತಿದ್ದೇನೆ. ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಿ ಗಾಡಿ ಓಡಿಸಿ ಎಂದು ಬೈಕ್ ಸವಾರಿ ತಿಳಿ ಹೇಳಿದ್ದಕ್ಕೆ ಪೊಲೀಸ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೋಬಿ ಮಂಚೂರಿಯಿಂದ ನಡೆದಿತ್ತು ವೃದ್ಧೆ ಶಾಂತಕುಮಾರಿ ಕೊಲೆ – 5 ವರ್ಷಗಳ ನಂತ್ರ ಆರೋಪಿಗಳು ಅರೆಸ್ಟ್
Advertisement
Advertisement
ವೀಡಿಯೋದಲ್ಲಿ ಪೊಲೀಸ್ ಪೇದೆಯೊಬ್ಬರು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದುದನ್ನು ಕಂಡ ಬೈಕ್ ಸವಾರ ಹೆಲ್ಮೆಟ್ ಧರಿಸುವಂತೆ ಮನವಿ ಮಾಡುತ್ತಾನೆ. ಈ ವೇಳೆ ಬೈಕ್ ಸವಾರನಿಗೆ ಅಡ್ಡ ಹಾಕಿ, ನಾನು ಹೆಲ್ಮೆಟ್ ಧರಿಸದಿದ್ದರೆ ನಿನಗೇನು ಸಮಸ್ಯೆ? ನನಗೆ ಬಹಳಷ್ಟು ಸಮಸ್ಯೆ ಇದೆ. ನಿನ್ನ ಕೆಲಸ ನೀನು ನೋಡಿಕೋ ಎಂದು ಅವಾಚ್ಯ ಶಬ್ಧದಿಂದ ನಿಂದಿಸಿರುವುದನ್ನು ಕಾಣಬಹುದಾಗಿದೆ.
Advertisement
Advertisement
ನಂತರ ಬೈಕ್ ಸವಾರ ನೀವು ಏನಾದರೂ ತಪ್ಪು ಮಾಡಿದ್ದೀರಾ ಎಂದಾಗ ಪೊಲೀಸ್ ಹೌದು ಮಾಡಿದ್ದೇನೆ. ನಿನಗೇನು ಎಂದು ಖಾರವಾಗಿ ಉತ್ತರಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ವರ್ತನೆಯ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕುರುಪಾಂಡವರು ಕಾದಾಡಿ, ಧರ್ಮದ ಜ್ಯೋತಿ ಬೆಳಗಿದರು- ಮೈಲಾರಲಿಂಗನ ಕಾರ್ಣಿಕ ನುಡಿ